
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ವಿಶೇವ ಆಫರ್ ಗಳನ್ನು ಕೊಡಲು ಮುಂದಾಗಿರುವ ಗೋಫಸ್ಟ್ ಬಜೆಟ್ ಏರ್‌ಲೈನ್, ಬೆಂಗಳೂರಿನಿಂದ ಪ್ರಯಾಣಿಸಲಿರುವ ತನ್ನ ಗ್ರಾಹಕರಿಗೆ ’ಉಚಿತ ಸೀಟುಗಳು ಮತ್ತು ಊಟ’ದ ವ್ಯವಸ್ಥೆ ಮಾಡುತ್ತಿದೆ.
ನೀವು ಬೆಂಗಳೂರಿನಿಂದ ದೇಶದ ಕೆಲ ಆಯ್ದ ಊರುಗಳಿಗೆ ಹಾರುವವರಿದ್ದರೆ, ಗೋಫಸ್ಟ್‌ನ ಆಫರ್‌ಗಳನ್ನು ಒಮ್ಮೆ ಪರಿಶೀಲಿಸಿ ನೋಡಿ. ಈ ಆಫರ್‌ಗಳು ಜನವರಿ 10, 2022ರವರೆಗೆ ಇರಲಿವೆ.
ಇಂಗ್ಲೆಂಡ್ ತಂಡದ ಬೆಂಬಲಿಗರ ಕೋರಿಕೆ ಮೇರೆಗೆ ಮೈದಾನದಲ್ಲೇ ಸ್ಟೆಪ್ ಹಾಕಿದ ಉಸ್ಮಾನ್ ಖವಾಜಾ
ಬೆಂಗಳೂರಿನಿಂದ ಮುಂಬೈ, ದೆಹಲಿ, ರಾಂಚಿ, ವಾರಣಾಸಿ, ಲಖನೌ, ಕೋಲ್ಕತ್ತಾ ಮತ್ತು ಪುಣೆಗೆ ಹಾರುವ ವೇಳೆ, ಉಚಿತವಾದ ವೆಬ್-ಚೆಕ್-ಇನ್, ಉಚಿತ ಸೀಟ್ ಆಯ್ಕೆ ಮತ್ತು ಮೀಲ್ ಅನ್ನು ಪಡೆಯುವ ಅವಕಾಶಗಳನ್ನು ಗೋಫಸ್ಟ್ ಕೊಡುತ್ತಿದೆ.
ಈ ಕುರಿತ ಹೆಚ್ಚಿನ ವಿವರಗಳನ್ನು ಗೋಫಸ್ಟ್‌ನ ಜಾಲತಾಣದಲ್ಲಿ ಕಂಡುಕೊಳ್ಳಬಹುದಾಗಿದೆ.