
ಶಿಕ್ಷಣ ವ್ಯವಸ್ಥೆ ಬಲಗೊಳಿಸಲು ಮಾಧ್ಯಮಿಕ ಶಾಲೆಗಳನ್ನು ತೆರೆಯಲಾಗುವುದು ಎಂದು ತಾಲಿಬಾನ್ ಘೋಷಿಸಿದಾಗ ಆಫ್ಘಾನಿ ಮಹಿಳೆಯರ ಮನಸ್ಸಿನಲ್ಲಿ ಭರವಸೆ ಬಂದಿತ್ತು. ಆದರೆ ಸ್ತ್ರೀ ಶಿಕ್ಷಣದ ಮೇಲೆ ಕಠಿಣ ನಿರ್ಬಂಧ ಹೇರಿದ್ದರಿಂದ ಅವರ ಕನಸುಗಳೆಲ್ಲ ಕನಸಾಗಿಯೇ ಉಳಿಯಿತು.
ತಾಲಿಬಾನ್ ಸರ್ಕಾರದ ಮೇಲಿನ ಕೋಪ ಮತ್ತು ದ್ವೇಷ ತೋರಿಸಿರುವ ದನಿ ಸಾಕಷ್ಟುಇದೆ. ಇದೀಗ ಬುರ್ಖಾ ಧರಿಸಿದ್ದ ಅಫ್ಘಾನಿ ಮಹಿಳೆಯೊಬ್ಬರು ಗೋಡೆಯ ಮೇಲೆ ತನ್ನ ಈ ದನಿಯನ್ನು ಮೂಡಿಸಿ ಜಗತ್ತಿಗೆ ಸಂದೇಶ ಕಳಿಸಿದ್ದಾಳೆ.
ಆಕೆಯ ಗೋಡೆ ಬರಹದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲಿನ ಪರಿಸ್ಥಿತಿ ಮತ್ತು ಜನರ ಮನಃಸ್ಥಿತಿ ಬಹಿರಂಗವಾಗಿದೆ. ಆ ವಿಡಿಯೋ ಕ್ಲಿಪ್ನಲ್ಲಿ, ಮಹಿಳೆಯ ಮುಖವು ಗೋಚರಿಸುವುದಿಲ್ಲ. ಆದರೆ ಗೋಡೆಯ ಮೇಲೆ ದಪ್ಪ ಕೆಂಪು ಅಕ್ಷರಗಳಲ್ಲಿ ʼಬ್ಯಾನ್ ತಾಲಿಬಾನ್ʼ ಎಂದು ಬರೆಯುವ ಮೂಲಕ ಸರ್ಕಾರದ ವಿರುದ್ಧದ ತನ್ನ ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸಿದ್ದಾಳೆ.
16 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರು ತಮ್ಮ ಮುಖ ಮುಚ್ಚಿಕೊಳ್ಳದೆ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಹಾಜರಾಗಲು ಅನುಮತಿಸದಿರುವುದು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಸಹ-ಶಿಕ್ಷಣವನ್ನು ಸಹ ನಿಷೇಧಿಸಿದೆ. ವ್ಯಾಪಕ ಟೀಕೆಗಳ ಹೊರತಾಗಿಯೂ ತಾಲಿಬಾನ್ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಾದ ಮಾರ್ಗಸೂಚಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುತ್ತಿದೆ.