ಎರಡು ವರ್ಷ ಕೊರೊನಾದಿಂದ ಶಾಲೆ ಮುಖವೇ ನೋಡದ ಮಕ್ಕಳು, ಈ ವರ್ಷ ಮತ್ತೆ ರೆಗ್ಯೂಲರ್ ಇದ್ದಾರೆ.
ಆದರೆ ಇಲ್ಲೊಬ್ಬರು ಟೀಚರ್ ಇದ್ದಾರೆ ನೋಡಿ, ಮಕ್ಕಳನ್ನ ಹೇಗೆ ಖುಷಿಯಾಗಿ ಇಡ್ಬಹುದು ಅನ್ನೋದು ಇವರಿಂದ ನೋಡಿ ತಿಳ್ಕೋಬೇಕು. ಕ್ಲಾಸಿಗೆ ಹೋಗುವ ಮುನ್ನ ಅಲ್ಲಿನ ಗೋಡೆಗೆ ಅಂಟಿಸಿದ್ದ ಪೋಸ್ಟರ್ ಚಿತ್ರವನ್ನ ಮುಟ್ಟಿ ಹೋಗಬೇಕು. ಆ ಪೋಸ್ಟರ್ನಲ್ಲಿ ಕೆಲ ಚಿತ್ರಗಳಿವೆ. ಒಂದೊಂದು ಚಿತ್ರ ಒಂದೊಂದು ಭಾವನೆ.
ಅಂದರೆ ಪೋಸ್ಟರ್ನಲ್ಲಿ ಕೈ ಚಿತ್ರ ಮುಟ್ಟಿದರೆ ನಿಂತಲ್ಲೇ ಡಾನ್ಸ್ ಮಾಡುವುದು, ಹಾರ್ಟ್ ಮುಟ್ಟಿದರೆ ಪ್ರೀತಿಯ ಅಪ್ಪುಗೆ, ಇನ್ನೊಂದು ಚಿತ್ರ ಮುಟ್ಟಿದರೆ, ನಮಸ್ಕಾರ ಮಾಡುವುದು, ಇಲ್ಲಾ ಹೈ-ಫೈ ಕೊಡುವುದು ಅಂತರ್ಥ. ಮಕ್ಕಳು ಕೂಡಾ ತಮಗಿಷ್ಟದ ಚಿತ್ರ ಬಿಡಿಸಿ ಕೊನೆಗೆ ಟೀಚರ್ ಮುಂದೆ ಡಾನ್ಸ್ ಮಾಡುವುದೋ, ಅಪ್ಪುಗೆ ಕೊಡುವುದೋ ಇಲ್ಲಾ ಆ ಚಿತ್ರದಲ್ಲಿ ಅವರಿಗಿಷ್ಟವಾದ ಒಂದು ಕಾರ್ಯ ಮಾಡುವುದು ಇಲ್ಲಿ ನೋಡಬಹುದಾಗಿದೆ. ಇದರಿಂದ ಮಕ್ಕಳಿಗೆ ಒಂದು ಆಟ ಆದರೆ, ಇನ್ನೂ ಟೀಚರ್ ಗೂ ಕೂಡಾ ಮಕ್ಕಳನ್ನ ಖುಷಿಯಾಗಿಡೋದಕ್ಕೆ ಒಂದು ದಾರಿ ಸಿಕ್ಕಂತಾಯಿತು.
ಅವಲೀನ್ ಫ್ಲೋ ಅನ್ನುವರು ಈ ವಿಡಿಯೋವನ್ನ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲವೇ ಕೆಲವು ಸೆಕೆಂಡ್ಗಳ ಈ ವಿಡಿಯೋ ಕ್ಯಾಪ್ಷನ್ನಲ್ಲಿ ‘ಕಲ್ಪನೆಯೂ ಮೀರಿದ ಅದ್ಭುತ ದೃಶ್ಯ ಇದು’ ಅಂತ ಬರೆದಿದ್ದ ಈ ಒಂದು ಸಾಲು ಮನಮುಟ್ಟುವಂತಿತ್ತು. ಈಗಾಗಲೇ 3 ಮಿಲಿಯನ್ ಜನರು ಈ ವಿಡಿಯೋವನ್ನ ವೀಕ್ಷಿಸಿದ್ದು, ನೆಟ್ಟಿಗರು ಈ ವಿಡಿಯೋ ನೋಡಿ ಟೀಚರ್ ಮಕ್ಕಳ ಜೊತೆ ಬೆರೆತಿರುವ ರೀತಿಗೆ ಫಿದಾ ಆಗಿ ಹೋಗಿದ್ದಾರೆ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಇಂಥಾ ಟೀಚರ್ ಇರಲೇಬೇಕು. ಇದೇ ರೀತಿ ಇನ್ನೂ ಭಿನ್ನ-ಭಿನ್ನವಾಗಿ ನೆಟ್ಟಿಗರು ಟೀಚರ್ನ್ನ ಹಾಡಿ ಹೊಗಳುತ್ತಿದ್ದಾರೆ.
https://twitter.com/TweetsofLibs/status/1538112272899264513?ref_src=twsrc%5Etfw%7Ctwcamp%5Etweetembed%7Ctwterm%5E1538112272899264513%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-adorable-video-of-a-teacher-greeting-her-students-is-going-crazy-viral-here-s-why-1964985-2022-06-21