ಮಾಜಿ ಕ್ರಿಕೆಟಿಗ ಇದೀಗ ರಾಜಕಾರಣಿ ಆಗಿರುವ ಗೌತಮ್ ಗಂಭೀರ್ ಅವರ ಮೇಲಿರುವ ಪ್ರೀತಿಯನ್ನು ಪ್ರಸಿದ್ಧ ಕಿರುತೆರೆ ನಟಿ ಮಹಿಕಾ ಶರ್ಮಾ ಬಹಿರಂಗಪಡಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘’ಗೌತಮ್ ಗಂಭೀರ್ ಅವರ ಮೇಲಿನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಅವರು ಮದುವೆಯಾಗಿದ್ದಾರೆ, ಅದನ್ನು ನಾನು ಗೌರವಿಸುತ್ತೇನೆ. ಆದರೆ ಅವರು ನನ್ನ ಕ್ರಶ್ ಅನ್ನೋದನ್ನು ಅಲ್ಲಗಳೆಯುವಂತಿಲ್ಲ’’ ಎಂದಿದ್ದಾರೆ.
ರಾಜ್ಯದಲ್ಲಿರೋದು ನಮ್ಮದೇ ಸರ್ಕಾರ: ಅಚ್ಚರಿ ಹೇಳಿಕೆ ನೀಡಿದ HDK
ಇನ್ನು ‘’ನೀವು ಒಬ್ಬಂಟಿಯಾಗಿರುವಾಗ ಮತ್ತು ಸಂಬಂಧದಲ್ಲಿಲ್ಲದಿದ್ದರೂ ಸಹ, ಒಬ್ಬಂಟಿಯಾಗಿರುವುದು ನೀರಸ. ಬಾಲ್ಯದ ದಿನಗಳಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೇಲೆ ಮೋಹವಿತ್ತು. ಆದರೆ ಭಾರತೀಯ ರಾಜಕಾರಣಿಗಳು ಹಾಗೂ ಮಾಜಿ ಕ್ರಿಕೆಟಿಗರ ಚಿತ್ರಗಳನ್ನು ನೋಡಿದ ನಂತರ ಬದಲಾಯಿತು’’ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಅಂದಹಾಗೆ ರಾಹುಲ್ ಗಾಂಧಿಯ ಬಗ್ಗೆ ಬಹಳ ಹಿಂದೆಯೇ ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಮಹಿಕಾ ಶರ್ಮಾ, ಪೊಲೀಸ್ ಫ್ಯಾಕ್ಟರಿ, ರಾಮಾಯಣ ಹಾಗೂ ಎಫ್ಐಆರ್ ನಂತಹ ಕಾರ್ಯಕ್ರಮಗಳನ್ನು ಮಾಡಿದ್ದಾರೆ.