ಭಾರತ ಸಿನಿಮಾ ರಂಗದಲ್ಲಿ ದೇವ್ ಆನಂದ್ ರಿಂದ ಹಿಡಿದು ಅಕ್ಷಯ್‌ಕುಮಾರ್‌ವರೆಗೆ ತಮ್ಮ ಸಿನಿಮಾಗಳ ಮೂಲಕ ಸ್ಟಾರ್ ಪಟ್ಟಕ್ಕೇರಿದ ನಟರು ಒಂದಾನೊಂದು ಕಾಲದಲ್ಲಿ ಬದುಕಿಗಾಗಿ ಒಂದಿಲ್ಲೊಂದು ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಒಂದು ಕಾಲದಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದ ನಟನನ್ನು ಒಮ್ಮೆ ಮಹಿಳೆಯೊಬ್ಬರು ಭಿಕ್ಷುಕ ಎಂದು ತಪ್ಪಾಗಿ ಭಾವಿಸಿದ್ದು ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅವರೇ ರಜನಿಕಾಂತ್.
ರಜನಿಕಾಂತ್ ಅವರು ಕೇವಲ 9 ವರ್ಷದವರಾಗಿದ್ದಾಗ ತಮ್ಮ ತಾಯಿಯನ್ನು ಕಳೆದುಕೊಂಡರು ಮತ್ತು ಅವರ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕೂಲಿ ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಿದರು. ಮೊದಲು ಬೆಂಗಳೂರು ಸಾರಿಗೆ ಸೇವೆಯಲ್ಲಿ ಬಸ್ ಕಂಡಕ್ಟರ್ ಆಗಿ 500 ರೂ.ಗೆ ಉದ್ಯೋಗವನ್ನು ಪಡೆದರು. ನಂತರ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಕೆ. ಬಾಲಚಂದರ್ ನಿರ್ದೇಶನದ ತಮಿಳು ಚಲನಚಿತ್ರ ಅಪೂರ್ವ ರಾಗಂಗಳ್ ನಲ್ಲಿ ನಟಿಸಿದರು. ಆದಾಗ್ಯೂ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಮೊದಲ ಚಿತ್ರವೆಂದರೆ ಮೂಂಡ್ರು ಮುಡಿಚು. ಇದರ ನಂತರ ರಜನಿಕಾಂತ್ ಚಿತ್ರರಂಗದಲ್ಲಿ ಹಿಂತಿರುಗಿ ನೋಡಲೇ ಇಲ್ಲ.
ಬಿಲ್ಲಾ, ಶಿವಾಜಿ ದಿ ಬಾಸ್, ಮುಳ್ಳುಮ್ ಮಲರುಮ್, ಅಂದಾ ಕಾನೂನ್, ಗಿರಾಫ್ತಾರ್, ಪಡಿಯಪ್ಪ, ಮಿಸ್ಟರ್ ಭರತ್, ದೋಸ್ತಿ ದುಷ್ಮನಿ, ವೆಲೈಕಾರನ್, ಮನಿಥನ್, ಧರ್ಮತಿನ್ ತಲೈವನ್ ಮತ್ತು ಚಾಲ್‌ಬಾಜ್‌ನಂತಹ ಹಲವಾರು ಬ್ಲಾಕ್‌ಬಸ್ಟರ್‌ಗಳನ್ನು ನೀಡಿದರು. ಅವಲ್ ಅಪ್ಪಡಿತಾನ್ ಮತ್ತು ಜೈಲರ್ ಸೇರಿದಂತೆ ಇತರ ಸಿನಿಮಾಗಳಲ್ಲಿ ಮತ್ತಷ್ಟು ಖ್ಯಾತಿಗಳಿಸಿದರು.
ಸೂಪರ್‌ಸ್ಟಾರ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದಾರೆ ಮತ್ತು ತಮಿಳು ಚಿತ್ರರಂಗದ ದೇವರಾಗಿದ್ದಾರೆ. ಅವರ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ ಮತ್ತು ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಅವರೂ ಒಬ್ಬರು.
ರಜನಿಕಾಂತ್ ಸ್ನೇಹಮಯಿಯಾಗಿದ್ದು, ಶಿಸ್ತಿನಿಂದ ಕೆಲಸ ಮಾಡುತ್ತಿದ್ದಷ್ಟೇ ಅಲ್ಲದೇ ಅತ್ಯಂತ ಸರಳ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಅವರ ಸಹನಟ ಅರವಿಂದ್ ಸ್ವಾಮಿ ಘಟನೆಯೊಂದನ್ನ ನೆನಪಿಸಿಕೊಂಡಿದ್ದಾರೆ.
ರಜನಿಕಾಂತ್ ಜೊತೆಗಿನ ಅವರ ಚೊಚ್ಚಲ ಚಿತ್ರದ ಘಟನೆಯನ್ನು ನೆನಪಿಸಿಕೊಂಡ ಅವರು, 2016 ರಲ್ಲಿ ಅಭಿಮಾನಿಗಳೊಂದಿಗಿನ ಸಂವಾದದ ಸಮಯದಲ್ಲಿ ಅರವಿಂದ್ ಅವರು ಸಮಯಕ್ಕಿಂತ ಮುಂಚಿತವಾಗಿ ಸೆಟ್ ಅನ್ನು ತಲುಪಿದ್ದರು. ಸೆಟ್ ಸುತ್ತಲೂ ಅಡ್ಡಾಡಲು ನಿರ್ಧರಿಸಿದ ಅವರು ಸ್ವಲ್ಪ ಹೊತ್ತು ನಿದ್ರೆ ಮಾಡಲೆಂದು ಆರಾಮದಾಯಕವಾದ ಹಾಸಿಗೆಯೊಂದಿಗೆ ಕೋಣೆಗೆ ಬಂದರು. ನಿದ್ರೆ ಮಾಡಿ ಕಣ್ಬಿಟ್ಟಾಗ ಅವರಿಗೆ ಆಶ್ಚರ್ಯವಾಗುವಂತೆ ರಜನಿಕಾಂತ್ ನೆಲದ ಮೇಲೆ ಮಲಗಿದ್ದನ್ನು ಕಂಡರು.
ಇದೇನಿದು ಎಂದು ನಿರ್ದೇಶಕರನ್ನು ಕೇಳಲು ಹೊರಟಾಗ, ನಿರ್ದೇಶಕರು ತಾವು ಮಲಗಿದ್ದ ಕೋಣೆ ಸೂಪರ್‌ಸ್ಟಾರ್‌ಗೆ ಸೇರಿದ್ದು ಎಂದು ಹೇಳಿದರಂತೆ. ಮಲಗಿದ್ದ ಅರವಿಂದ್ ಸ್ವಾಮಿ ಅವರನ್ನು ನಿದ್ರೆಯಿಂದ ಎಬ್ಬಿಸುವ ಬದಲು, ಸೂಪರ್‌ಸ್ಟಾರ್ ರಜನಿಕಾಂತ್ ನೆಲದ ಮೇಲೆ ಮಲಗಲು ನಿರ್ಧರಿಸಿದ್ದರಂತೆ.
ನೇತ್ರತಜ್ಞೆ ಗಾಯತ್ರಿ ಶ್ರೀಕಾಂತ್ ಅವರು ಬರೆದಿರುವ ರಜನಿಕಾಂತ್ ಅವರ ಜೀವನಚರಿತ್ರೆ, ‘ದಿ ನೇಮ್ ಈಸ್ ರಜನಿಕಾಂತ್’ ನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ರನ್ನು ಒಮ್ಮೆ ಭಿಕ್ಷುಕ ಎಂದು ಹೇಗೆ ತಪ್ಪಾಗಿ ಭಾವಿಸಲಾಗಿತ್ತು ಎಂಬುದರ ಕುರಿತು ಒಂದು ಸಣ್ಣಕಥೆಯಿದೆ. ರಜನಿಯ ಬ್ಲಾಕ್‌ಬಸ್ಟರ್ ಶಿವಾಜಿ — ದಿ ಬಾಸ್ ನಂತರ, ರಜನಿಕಾಂತ್ ಅವರು ತಮ್ಮ ಸ್ನೇಹಿತನೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದರು. ಅವರ ಅಪಾರ ಜನಪ್ರಿಯತೆಯಿಂದಾಗಿ ಅಭಿಮಾನಿಗಳು ಸೇರಿ ಕಾಲ್ತುಳಿತ ಸಂಭವಿಸಬಹುದು ಎಂದು ಎಚ್ಚರಿಸಿದಾಗ ರಜನಿಕಾಂತ್ ವೇಷ ಧರಿಸಲು ನಿರ್ಧರಿಸಿದರು ಎಂಬುದು ಪುಸ್ತಕದಲ್ಲಿದೆ. ಅವರು ಸುಕ್ಕುಗಟ್ಟಿದ ಅಂಗಿ ಮತ್ತು ಸರಳವಾದ ಲುಂಗಿಯನ್ನು ಧರಿಸಿದ್ದರು ಮತ್ತು ತಲೆಯ ಮೇಲೆ ದಪ್ಪವಾದ ಶಾಲು ಹೊದ್ದುಕೊಂಡು ಭಿಕ್ಷುಕನಂತೆ ದೇವಸ್ಥಾನಕ್ಕೆ ತೆರಳಿದರು.
ಈ ವೇಳೆ ಮಧ್ಯವಯಸ್ಸಿನ ಗುಜರಾತಿ ಮಹಿಳೆಯೊಬ್ಬರು ಭಿಕ್ಷುಕನ ಬಳಿಗೆ ಬಂದು 10 ರೂ. ನೋಟನ್ನು ನೀಡಿ ಕರುಣೆ ತೋರಿದರು. ಆಗ ರಜಿನಿಕಾಂತ್ ನಯವಾಗಿ ಹಣವನ್ನು ತೆಗೆದುಕೊಂಡರು. ಬಳಿಕ ದೇವಸ್ಥಾನದ ಹುಂಡಿಯಲ್ಲಿ 100 ರೂಪಾಯಿ ನೋಟು ಹಾಕಿದ್ದನ್ನು ನೋಡಿ ಮಹಿಳೆ ಗೊಂದಲಕ್ಕೊಳಗಾದರು. ನಂತರ ರಜನಿ ಪೋರ್ಷೆ ಕಾರ್ ಹತ್ತುತ್ತಿದ್ದನ್ನು ನೋಡಿದ ಮಹಿಳೆ ತನ್ನ ತಪ್ಪನ್ನು ಅರಿತುಕೊಂಡು ಮುಜುಗರಕ್ಕೊಳಗಾಗಿ ಕ್ಷಮೆಯಾಚಿಸಿದರು.
ತಾನು ಕೊಟ್ಟ 10 ರೂಪಾಯಿಯನ್ನು ಹಿಂತೆದುಕೊಳ್ಳುತ್ತೇನೆಂದು ಮಹಿಳೆ ಮನವಿ ಮಾಡಿದರು. ಆದರೆ ನಟ ರಜನಿಕಾಂತ್ ಉತ್ತರಿಸಿ, “ಪ್ರತಿ ಬಾರಿಯೂ ನಾನು ದೇವರ ಮುಂದೆ ಏನೂ ಅಲ್ಲ, ನಾನು ಒಂದು ರೀತಿ ಅವನ ಮುಂದೆ ಭಿಕ್ಷುಕ ಎಂಬುದನ್ನು ನೆನಪಿಸಲು
-ಭಗವಂತ ಈ ಮಾರ್ಗದಲ್ಲಿ ತೋರಿಸಿದ್ದಾನೆ. ನೀವು ಅವನ ನಾಟಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ . ಇದು ನಾವ್ಯಾರೂ ಅವನ ಮುಂದೆ ಏನೂ ಅಲ್ಲ ಎಂದು ಹೇಳುವ ವಿಧಾನವಾಗಿದೆ ” ಎಂದು ಹೇಳಿದ್ದರಂತೆ.
ಆದಾಗ್ಯೂ, ಒಂದು ಕಾಲದಲ್ಲಿ ತನ್ನ ಮೊದಲ ಸಂಭಾವನೆಯಾಗಿ 500 ರೂಪಾಯಿಗಳನ್ನು ಪಡೆದ ನಟ ರಜನಿಕಾಂತ್ ಈಗ ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿ ಪಡೆಯುತ್ತಾರೆ. ಕಾರುಗಳ ಸಂಗ್ರಹದೊಂದಿಗೆ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ಅವರ ನಿವ್ವಳ ಮೌಲ್ಯವು 430 ಕೋಟಿ ರೂಪಾಯಿಯಾಗಿದೆ, ಹೀಗಾಗಿ ಅವರು ದೇಶದ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ.