ಇಂದಿನ ಆಧುನಿಕ, ಯಾಂತ್ರಿಕ ಯುಗದಲ್ಲೂ ಹಲವು ಮಾನವೀಯತೆಯ ಕಾರ್ಯಗಳು ಗಮನ ಸೆಳೆಯುತ್ತವೆ. ಅದರಲ್ಲೂ ಮೂಕಪ್ರಾಣಿಗಳ ಬಗೆಗೆ ತೋರುವ ದಯೆ ಹೃದಯಸ್ಪರ್ಶಿಯಾಗಿರುತ್ತದೆ. ಮುಂಬೈನ ಬೊರಿವಲಿಯಲ್ಲಿನ ಕ್ವೀನ್ಸ್ ಲಾನ್ ಹೌಸಿಂಗ್ ಸೊಸೈಟಿಯಲ್ಲಿರುವ 70 ವರ್ಷದ ಭದ್ರತಾ ಸಿಬ್ಬಂದಿ ಗುಪ್ತಾ ಜಿ ತಮ್ಮ ನೆಚ್ಚಿನ ಸಾಕುನಾಯಿಯೊಂದಿಗೆ ಕೆಲಸಕ್ಕೆ ತೆರಳುವುದು ಅವರ ದಿನಚರಿಯಾಗಿದೆ.
ತಮ್ಮ ಸೈಕಲ್‌ನ ಬಾರ್‌ನಲ್ಲಿ ನೇತಾಕುವ ಬ್ಯಾಗ್ ನಲ್ಲಿ ನಾಯಿಯನ್ನು ಕೂರಿಸಿಕೊಂಡು
70 ವರ್ಷದ ಗುಪ್ತಾಜಿ 30 ಕೆ.ಜಿ ತೂಕದ ನಾಯಿಯೊಂದಿಗೆ ಪ್ರತಿದಿನ 20 ಕಿಲೋ ಮೀಟರ್ ದೂರ ಸೈಕಲ್ ತುಳಿಯುತ್ತಾ ಕೆಲಸಕ್ಕೆ ಹೋಗತ್ತಾರೆ. ದಹಿಸರ್ ನಿಂದ ಬೋರಿವಲಿವರೆಗೆ ತನ್ನ ಪ್ರೀತಿಯ ಸಾಕುನಾಯಿ ಟೈಗರ್ ನೊಂದಿಗೆ ಅವರು ಕೆಲಸಕ್ಕೆ ಹೋಗುತ್ತಾರೆ. ಗುಪ್ತಾಜಿಯ ಈ ನಡೆ ಸ್ಥಳೀಯರಲ್ಲಿ ಅಚ್ಚರಿಯ ಜೊತೆಗೆ ಸಂತಸ ಮೂಡಿಸಿದೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಹೃದಯಸ್ಪರ್ಶಿ ದೃಶ್ಯಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಗುಪ್ತಾ ಜಿಗೆ ಪ್ರಾಣಿಗಳ ಮೇಲಿರುವ ಪ್ರೀತಿ ಇಲ್ಲಿಗೇ ನಿಲ್ಲುವುದಿಲ್ಲ. ಇತರ ನಾಯಿಮರಿಗಳ ಮೇಲೂ ಅವರು ಕಾಳಜಿ ತೋರುತ್ತಾರೆ. ಅವುಗಳಿಗೆ ಆಹಾರ ಮತ್ತು ಆಶ್ರಯವಿದೆಯಾ ಎಂಬುದನ್ನ ಖಚಿತಪಡಿಸಿಕೊಳ್ಳುತ್ತಾರೆ.