alex Certify ವಿಚಿತ್ರ ಕಾಯಿಲೆಯಿಂದ ಕಲ್ಲಾಗಿ ಬದಲಾಗುತ್ತಿದೆ 5 ತಿಂಗಳ‌ ಈ ಕಂದಮ್ಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಕಾಯಿಲೆಯಿಂದ ಕಲ್ಲಾಗಿ ಬದಲಾಗುತ್ತಿದೆ 5 ತಿಂಗಳ‌ ಈ ಕಂದಮ್ಮ…!

ಅತ್ಯಂತ ವಿರಳವಾದ ಜೀನ್ಸ್​ ಅನುವಂಶಿಕ ತೊಂದರೆ ಹೊಂದಿರುವ 5 ತಿಂಗಳ ಪುಟ್ಟ ಕಂದಮ್ಮವೊಂದು ಕಲ್ಲಾಗಿ ಬದಲಾಗುತ್ತಿದೆ. ಹೆಣ್ಣು ಮಗು ಲೆಕ್ಸಿ ರೋಬಿನ್ಸ್​ ಈ ವಿಚಿತ್ರ ಕಾಯಿಲೆಗೆ ತುತ್ತಾಗಿದೆ. ಇದೊಂದು ಗುಣಪಡಿಸಲಾಗದ ಸಮಸ್ಯೆಯಾಗಿದ್ದು ಪ್ರತಿ 2 ಮಿಲಿಯನ್​ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ.

ಲೆಕ್ಸಿ ಜನವರಿ 31ರಂದು ಬ್ರಿಟನ್​​ನಲ್ಲಿ ಅಲೆಕ್ಸ್ ಹಾಗೂ ಡೇವ್​ ದಂಪತಿಯ ಪುತ್ರಿಯಾಗಿ ಜನಿಸಿದಳು. ಜನಿಸಿದ ವೇಳೆ ಲೆಕ್ಸಿಯ ಹೆಬ್ಬೆರಳು ಸರಿಯಾಗಿ ಚಲಾವಣೆಯಾಗುತ್ತಿರಲಿಲ್ಲ. ಹಾಗೂ ಕಾಲಿನ ಹೆಬ್ಬೆರಳು ಕೂಡ ಸರಿಯಾದ ಬೆಳವಣಿಗೆ ಹೊಂದಿರಲಿಲ್ಲ. ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ ವೇಳೆ ಇದು ಫೈಬ್ರೋಡೈಸ್ಪ್ಲಾಸಿಯಾ ಒಸಿಫಿಕಾನ್ಸ್ ಪ್ರೋಗ್ರೆಸ್ಸಿವಾ ಎಂಬ ಕಾಯಿಲೆಯಿಂದ ಬಳಲುತ್ತಿದೆ ಎಂದು ತಿಳಿದುಬಂದಿದೆ.

ಅಬ್ಬಬ್ಬಾ….! ದಂಗಾಗಿಸುತ್ತೆ ಪ್ರತಿ ಇನ್​ಸ್ಟಾ ಪೋಸ್ಟ್​​ಗೆ ಭಾರತೀಯ ಸೆಲೆಬ್ರಿಟಿಗಳು ಪಡೆಯುವ ಸಂಭಾವನೆ

ಈ ಕಾಯಿಲೆಯನ್ನ ಹೊಂದಿರುವವರಲ್ಲಿ ಮೂಳೆಗಳು ಸರಿಯಾಗಿ ಬೆಳವಣಿಗೆ ಹೊಂದೋದಿಲ್ಲ. ದೇಹದಲ್ಲಿ ಹೆಚ್ಚುವರಿ ಮೂಳೆಗಳ ಬೆಳವಣಿಗೆ ಹೊಂದಬಹುದು. ಈ ಪರಿಸ್ಥಿತಿಯನ್ನ ಸಾಮಾನ್ಯವಾಗಿ ದೇಹ ಕಲ್ಲಾಗೋದು ಎಂದು ಹೇಳಲಾಗುತ್ತದೆ. ಸುಮಾರು 20 ವರ್ಷ ವಯಸ್ಸಾಗುತ್ತಿದ್ದಂತೆಯೇ ಅವರು ಸಂಪೂರ್ಣ ಹಾಸಿಗೆ ಹಿಡಿಯುತ್ತಾರೆ ಹಾಗೂ ಅಬ್ಬಬ್ಬಾ ಅಂದರೆ 40 ವರ್ಷಗಳವರೆಗೆ ಬದುಕಿರಬಹುದು.

ಈ ಕಾಯಿಲೆಯನ್ನ ಹೊಂದಿರುವ ಲೆಕ್ಸಿಗೆ ಲಸಿಕೆ, ಚುಚ್ಚು ಮದ್ದುಗಳನ್ನ ನೀಡೋಕೆ ಆಗೋದಿಲ್ಲ. ಅಲ್ಲದೇ ಈಕೆಗೆ ಹಲ್ಲು ಸಂಬಂಧಿ ಸಮಸ್ಯೆಗಳಿಗೆ ಯಾವುದೇ ಚಿಕಿತ್ಸೆ ನೀಡಲೂ ಬರೋದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...