ಆಶ್ಟನ್ ಫಿಶರ್ ಹೆಸರಿನ 12 ವರ್ಷದ ಈ ಬಾಲಕನಿಗೆ ಬಿಳಿ ಬ್ರೆಡ್ ಮತ್ತು ಯೋಗರ್ಟ್ ಬಿಟ್ಟರೆ ಬೇರೇನನ್ನೂ ತಿನ್ನಲು ಆಗದಂಥ ಪಥ್ಯ ಸವಾಲು ಕಳೆದ 10 ವರ್ಷಗಳಿಂದ ಇದೆ.
ಅಪರೂಪದ ರೋಗವೊಂದರಿಂದ ಬಳಲುತ್ತಿರುವ ಈ ಬಾಲಕನಿಗೆ ಸಾಮಾನ್ಯವಾದ ಆಹಾರ ಪದಾರ್ಥಗಳನ್ನು ಸೇವಿಸಲು ಏನಾಗುತ್ತದೋ ಎಂಬ ಭೀತಿ ಯಾವಾಗಲೂ ಕಾಡುತ್ತದೆ.
ಫುಡ್ ಫೋಬಿಯಾದಿಂದ ಬಳಲುತ್ತಿರುವ ಆಶ್ಟನ್‌ಗೆ ಆತನ ಹೆತ್ತವರು ಪಥ್ಯದಲ್ಲಿ ಬದಲಾವಣೆ ತರಲು ನೋಡಿದಾಗೆಲ್ಲಾ ಗಾಬರಿ ಬೀಳುತ್ತಿದ್ದ.
ಆತನ ಸಮಸ್ಯೆಯನ್ನು ಬೇಧಿಸಿದ ಮನಃಶಾಸ್ತ್ರಜ್ಞರೊಬ್ಬರು, ಆಶ್ಟನ್‌ಗೆ ಅವಾಯ್ಡೆಂಟ್ ರೆಸ್ಟ್ರಿಕ್ಟಿವ್ ಫಡ್ ಇನ್‌ಟೇಕ್ ಡಿಸಾರ್ಡರ್ ಸಮಸ್ಯೆ ಇದೆ ಎಂದು ಅರಿತುಕೊಂಡಿದ್ದಾರೆ. ಮಗುವಾಗಿದ್ದಾಗ ಈತನ ಜೀರ್ಣಾಂಗ ವ್ಯವಸ್ಥೆಯು ಆಹಾರ ಹಾಗೂ ಪಚನರಸಗಳನ್ನು ಒಳಗೆ ಬಿಡದೇ ಇದ್ದ ಕಾರಣ ಆತನಿಗೆ ಈ ಫೋಬಿಯಾ ಬಂದಿರಬಹುದು ಎಂದು ಆಶ್ಟನ್ ತಾಯಿ ಹೇಳುತ್ತಾರೆ.
ಕಳೆದೊಂದು ದಶಕದಿಂದ ಬ್ರೆಡ್ ಹಾಗೂ ಯೋಗರ್ಟ್‌ನಿಂದಲೇ ಬದುಕುಳಿದಿರುವ ಆಶ್ಟನ್ ಇತ್ತೀಚೆಗೆ ತನ್ನ ಪಥ್ಯದಲ್ಲಿ ರೋಸ್ಟೆಡ್ ಪದಾರ್ಥಗಳನ್ನು ನಿಧಾನವಾಗಿ ಸೇರಿಸಿಕೊಳ್ಳುತ್ತಿದ್ದಾನೆ.