ನಾಣ್ಯ ಸಂಗ್ರಹಗಾರರಿಗೆ ಒಮ್ಮೊಮ್ಮೆ ಅದ್ಯಾವ ಮಟ್ಟಿಗೆ ಅದೃಷ್ಟ ಖುಲಾಯಿಸಬಲ್ಲದು ಎಂದರೆ, ಇತ್ತೀಚಿನ ದಿನಗಳಲ್ಲಿ ಈ ಮಂದಿ ಆನ್ಲೈನ್ ಮೂಲಕ ತಮ್ಮಲ್ಲಿರುವ ಅಪರೂಪದ ನಾಣ್ಯಗಳನ್ನು ಮಾರಿ ಲಕ್ಷಾಂತರ ರೂಪಾಯಿ ಜೇಬಿಗಿಳಿಸುತ್ತಿರುವ ಅನೇಕ ಸುದ್ದಿಗಳನ್ನು ಓದಿರುತ್ತೀರಿ.
ಇಲ್ಲಿ ಕಾಣಿಸಿರುವ 1ರೂ ಮುಖಬೆಲೆಯ ನಾಣ್ಯವನ್ನು ಕೆಲವೇ ತಿಂಗಳ ಹಿಂದೆ 10 ಕೋಟಿ ರೂ.ಗಳಿಗೆ ಹರಾಜಿಗಿಡಲಾಗಿದೆ. ಹೌದು, ನೀವು ಕೇಳಿದ್ದು ಸರಿಯಾಗಿದೆ, ಒಂದು ರೂ. ಮುಖಬೆಲೆ ನಾಣ್ಯವನ್ನು 10 ಕೋಟಿಗೆ ಬಿಕರಿ ಮಾಡಲಾಗಿದೆ.
ಒಮಿಕ್ರಾನ್ ಭೀತಿ: ಈ ಬಾರಿಯೂ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಬ್ರಿಟಿಷ್ ಭಾರತದ ಕಾಲದ ವಿಶೇಷ ನಾಣ್ಯವಾದ ಇದನ್ನು 1885ರಲ್ಲಿ ಟಂಕಿಸಲಾಗಿದೆ. ನಿಮ್ಮಲ್ಲಿಯೂ ಇಂಥದ್ದೇ ಒಂದು ನಾಣ್ಯವಿದ್ದಲ್ಲಿ ಅದನ್ನು ಆನ್ಲೈನ್‌ನಲ್ಲಿ ಹರಾಜಿಗೆ ಇಡಬಹುದು.
ಇಬೇ ಅಥವಾ ಓಎಲ್‌ಎಕ್ಸ್ ಮೂಲಕ ಮೇಲ್ಕಂಡ ನಾಣ್ಯದ ಚಿತ್ರಗಳನ್ನು ತೆಗೆದು, ಅವುಗಳನ್ನು ಅಪ್ಲೋಡ್ ಮಾಡಿ ಮಾರಾಟ ಮಾಡಬಹುದಾಗಿದೆ.