ಅರ್ಧ ರಾತ್ರಿಯಲ್ಲಿ ದಾಹವಾಗಿ ನೀರು ಎಂದುಕೊಂಡು ಮೇಣ ಕುಡಿದ ವ್ಯಕ್ತಿಯೊಬ್ಬ ತನ್ನ ಬಾಯಿ ಹಾಗೂ ಹಲ್ಲುಗಳಿಗೆ ಫಜೀತಿ ಮಾಡಿಕೊಂಡ ಘಟನೆಯನ್ನು ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಿದ್ರೆ ಮಂಪರಿನಲ್ಲೇ ದಾಹ ತಣಿಸಿಕೊಳ್ಳಲು ತನ್ನ ಹಿಂದೆ ಇದ್ದ ಟೇಬಲ್‌ಗೆ ಕೈ ಹಾಕಿದಾಗ ಏನು ಸಿಕ್ಕಿತೋ ಅದನ್ನೇ ತೆಗೆದುಕೊಂಡು ಕುಡಿದಾಗ ಹೀಗೆ ಎಡವಟ್ಟಾಗಿದೆ ಎಂದು ಈ ವ್ಯಕ್ತಿ ಬರೆದುಕೊಂಡಿದ್ದಾರೆ.
ಟೆಕ್ನಾಲಾಜಿಯಲ್ಲಿ ಬಳಸಲಾಗುವ ಈ ಪದಗಳ ಫುಲ್ಫಾರ್ಮ್ ನಿಮಗೆ ಗೊತ್ತಾ….? ಇಲ್ಲಿದೆ ಒಂದಷ್ಟು ಮಾಹಿತಿ
“ನಾನು ಮಾಡಿದ ಅತ್ಯಂತ ವಿಚಿತ್ರ ಕೆಲಸಗಳಲ್ಲಿ ಇದು ಒಂದು. ಏನೂ ಮಾಡಲು ಆಗವುದಿಲ್ಲ, ನನಗೇ ನಗು ಬರುತ್ತದೆ ಇದನ್ನು ನೆನೆದರೆ. ನನ್ನ ಹಾಸಿಗೆ ಪಕ್ಕ ಸಾಮಾನ್ಯವಾಗಿ ನೀರು ಇಡುತ್ತೇನೆ. ನಿದ್ರೆಯ ಮಂಪರಿನಲ್ಲಿ ಎದ್ದ ನಾನು, ಕತ್ತಲೆಯಲ್ಲಿ ನನ್ನ ನೈಟ್‌ಸ್ಟಾಂಡ್ ಮೇಲಿದ್ದ ಬಾಟಲಿಯನ್ನು ತಲುಪಿ, ಕೈಗೆ ಸಿಕ್ಕ ಮೊದಲ ವಸ್ತುವನ್ನು ತೆಗೆದುಕೊಂಡೆ. ಅದು ಕ್ಯಾಂಡಲ್ ಎಂದು ಅರಿತುಕೊಳ್ಳದ ನಾನು ಕುಡಿದ ಮೇಲೆ ಬಾಯೆಲ್ಲಾ ಬೆಚ್ಚಗಿನ ಸಿಹಿ ರೋಸ್‌ಮೇರಿ ವೆನಿಲ್ಲಾ ಕ್ಯಾಂಡಲ್ ಮೇಣ ಆವರಿಸಿದ ಬಳಿಕ ಏನೆಂದು ತಿಳಿದೆ” ಎಂದು ಈ ಅನಾಮಧೇಯ ನೆಟ್ಟಿಗ ಹೇಳಿಕೊಂಡಿದ್ದಾರೆ.