ಮಹಾರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆಯು ಡಿಸೆಂಬರ್ ತಿಂಗಳಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಆದರೆ ಈ ಅಲೆಯು ಸೌಮ್ಯ ಪ್ರಮಾಣದಲ್ಲಿ ಇರಲಿದೆ ಎನ್ನಲಾಗಿದೆ.
ತಜ್ಞರು ನೀಡಿರುವ ಮಾಹಿತಿಯ ಪ್ರಕಾರ, ಕೊರೊನಾ ಅಲೆಗಳು ನಿಗದಿತ ಸಮಯಕ್ಕೆ ಅಪ್ಪಳಿಸುತ್ತದೆ.
ಉದಾಹರಣೆಗೆ ಕೊರೊನಾ ಮೊದಲ ಅಲೆ ಸೆಪ್ಟೆಂಬರ್ 2020ರಲ್ಲಿ, ಎರಡನೆಯ ಅಲೆ ಈ ವರ್ಷದ 2021ರಲ್ಲಿ ಇದರನ್ವಯ ಮೂರನೇ ಅಲೆಯು ಡಿಸೆಂಬರ್ ತಿಂಗಳಲ್ಲಿ ಅಪ್ಪಳಿಸಬಹುದು ಎಂದು ನಿರೀಕ್ಷಿಸಲಾಗಿದೆ ಅಂತಾ ಹೇಳಿದ್ರು.
ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಲಸಿಕೆ ಅಭಿಯಾನವು ಭರದಿಂದ ಸಾಗಿದ್ದು ಇದರಿಂದಾಗಿ ಕೊರೊನಾ ಮೂರನೇ ಅಲೆಯು ಗಂಭೀರ ಪ್ರಮಾಣವನ್ನು ಉಂಟು ಮಾಡಲಿಕ್ಕಿಲ್ಲ ಎಂಬ ನಿರೀಕ್ಷೆಯಿದೆ ಎಂದು ಟೋಪೆ ಹೇಳಿದ್ರು.
ಮಹಾರಾಷ್ಟ್ರದಲ್ಲಿ 80 ಪ್ರತಿಶತ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಕೋವಿಡ್ 19 ನಿಯಂತ್ರಣಕ್ಕೆ ತರುವಲ್ಲಿ ಕೊರೊನಾ ಲಸಿಕೆಯು ಮಹತ್ವದ ಪಾತ್ರ ವಹಿಸಿದೆ. ಸೋಂಕಿನ ಪ್ರಮಾಣವು ತುಂಬಾನೇ ಕಡಿಮೆಯಾಗಿದೆ, ಸಾವಿನ ಸಂಖ್ಯೆಯಂತೂ ಶೂನ್ಯದ ಹತ್ತಿರವಿದೆ. ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಆ್ಯಂಟಿಬಾಡಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಡಿಸೆಂಬರ್ನಲ್ಲಿ ಕೊರೊನಾ ಮೂರನೇ ಅಲೆ ಬರುವ ನಿರೀಕ್ಷೆ ಇದೆ. ಆದರೆ ಲಸಿಕೆಯಿಂದಾಗಿ ಕೊರೊನಾ ಮೂರನೇ ಅಲೆಯು ಸೌಮ್ಯ ಪ್ರಮಾಣದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಐಸಿಯು ಹಾಗೂ ಆಕ್ಸಿಜನ್ಗೆ ಬೇಡಿಕೆ ಕಡಿಮೆ ಇರಲಿದೆ ಎಂದು ಹೇಳಿದ್ರು.