alex Certify ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು ನಿಲ್ಲಿಸಿದ್ದಾರೆ. ಹೀಗಾಗಿ ಭಾನುವಾರ ಸೋಲನ್​ ಜಿಲ್ಲೆಯ ಪರ್ವನು ಗಡಿಯಲ್ಲಿ ವಾಹನಗಳ ದಂಡೇ ನೆರೆದಿದೆ.

ಕಳೆದ ವಾರದಿಂದ ಹಿಮಾಚಲ ಪ್ರದೇಶ ಸರ್ಕಾರ ಕೋವಿಡ್​ 19 ನಿರ್ಬಂಧಗಳನ್ನ ಸಡಿಲಿಸಿದೆ. ಇದೇ ಕಾರಣಕ್ಕೆ ಶಿಮ್ಲಾದಲ್ಲಿ ಪ್ರವಾಸಿಗರ ದಂಡೇ ಹರಿದುಬರ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ವಿಡಿಯೋದಲ್ಲಿ ಸೋಲನ್​ ಜಿಲ್ಲೆಯ ಪರ್ವಾನೋ ಗಡಿಯಲ್ಲಿ ವಾಹನಗಳ ರಾಶಿಯೇ ಕಂಡು ಬಂದಿದೆ.

ಹಿಮಾಚಲ ಪ್ರದೇಶದಲ್ಲಿ ಕೊರೊನಾ ಕೇಸ್​ಗಳು ಕಂಡು ಬಂದ ಹಿನ್ನೆಲೆ ಪ್ರವಾಸಿಗರು ಆರ್​ಟಿ ಪಿಸಿಆರ್​ ಪರೀಕ್ಷೆಯ ವರದಿ ಹೊಂದಿರಬೇಕು ಎಂದೇನಿಲ್ಲ ಎಂದು ಹೇಳಿದೆ. ಆದರೆ ಪ್ರವಾಸಿಗರು ಇ ಪಾಸ್​ಗಳನ್ನ ಹೊಂದೋದು ಕಡ್ಡಾಯವಾಗಿದೆ.

ಈ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆಯೇ ಹರಿದಿದೆ. ಅನೇಕರು ಪ್ರವಾಸಿಗರನ್ನ ಬೈದುಕೊಂಡರೆ ಇನ್ನು ಕೆಲವರು ಇದನ್ನೇ ಜೋಕ್​ ಮಾಡಿದ್ದಾರೆ.

— Monowar Hussain (@Monowartlp) June 13, 2021

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...