ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ನೇಹಿತರಿರುತ್ತಾರೆ. ಕೆಲವರಿಗೆ ಕಡಿಮೆ ಸ್ನೇಹಿತರಿದ್ದರೆ ಕೆಲವರಿಗೆ ಹೆಚ್ಚು ಸ್ನೇಹಿತರಿರುತ್ತಾರೆ. ಕೆಲವರು ಸ್ನೇಹಿತರು ಜೀವನದಲ್ಲಿ ಬಂದು ಹೋಗುತ್ತಾರೆ, ಕೆಲವರು ಜೀವನ ಪರ್ಯಂತ ಸ್ನೇಹಿತರಾಗಿರುತ್ತಾರೆ.
ಆದರೆ ನಿಮಗೆ ಇಂತಹ ಸ್ನೇಹಿತರು ಸಿಕ್ಕಿದ್ದರೆ ಅವರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.
ನಿಮ್ಮ ಸಂತೋಷದಲ್ಲಿ ಸಂತೋಷವಾಗಿರುವ ಜನರು ಬಹಳ ಕಡಿಮೆ. ಯಾರು ನಿಮ್ಮ ಸಂತೋಷದಲ್ಲಿ ಸಂತೋಷವಾಗಿರುತ್ತಾರೆ. ಯಾರಿಗೆ ನಿಮ್ಮ ಸಾಧನೆ ಬಹಳ ಮುಖ್ಯ. ಅಂತಹ ನಿಮ್ಮ ಸ್ನೇಹಿತರನ್ನು ನಿಮ್ಮ ಜೀವನದಿಂದ ದೂರ ಕಳುಹಿಸಬೇಡಿ.
ಎಲ್ಲರೂ ಮಾತನಾಡಲು ಬಯಸುತ್ತಾರೆ, ಕೇಳಲು ಬಯಸುವುದಿಲ್ಲ. ಆದರೆ ನಿಮ್ಮ ಮಾತುಗಳನ್ನು ಯಾರು ಕೇಳಲು ಬಯಸುತ್ತಾರೆ ಮತ್ತು ನಿಮ್ಮ ಸಮಸ್ಯೆಗಳನ್ನು ಕೇಳಿ ಅದನ್ನು ಪರಿಹರಿಸುತ್ತಾರೆ. ಅಂತಹ ಸ್ನೇಹಿತರನ್ನು ನೀವು ಕಳೆದುಕೊಳ್ಳಬೇಡಿ.
ಜನರು ಹೆಚ್ಚಾಗಿ ನಮ್ಮ ವಿರುದ್ಧವಾಗಿ ಹೋಗುತ್ತಾರೆ. ಇದರಿಂದ ನಿಮ್ಮ ಭರವಸೆ ದೂರವಾಗುತ್ತದೆ. ಆದರೆ ಯಾರು ನಿಮ್ಮನ್ನು ಸಕರಾತ್ಮಕ ವಿಚಾರದಲ್ಲಿ ಪ್ರೇರೆಪಿಸುತ್ತಾರೆ. ಅಂತಹ ಸ್ನೇಹಿತರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ.
ಪ್ರತಿಯೊಬ್ಬರ ಜೀವನದಲ್ಲಿಯೂ ಸಮಸ್ಯೆಗಳಿರುತ್ತದೆ. ಆದರೆ ತಮ್ಮ ಸಮಸ್ಯೆಗಳನ್ನು ಮರೆತು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಾರೋ ಅಂತಹ ಸ್ನೇಹಿತರನ್ನು ನಿಮ್ಮ ಜೀವನದಿಂದ ಯಾವತ್ತು ದೂರವಾಗಲು ಬಿಡಬೇಡಿ.
ಕೆಲವು ಸ್ನೇಹಿತರು ಕಡಿಮೆ ಮಾತನಾಡುತ್ತಾರೆ. ಆದರೆ ಅವರು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಅಂತಹ ಸ್ನೇಹಿತರನ್ನು ನಿಮ್ಮಿಂದ ದೂರ ಮಾಡಬೇಡಿ.