ಕೆಲವು ವಸ್ತುಗಳನ್ನು ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ತಿಂದರೆ ಅದರೆ ರುಚಿ ಹಾಳಾಗುವುದಿಲ್ಲ. ಆದರೆ ಇನ್ನು ಕೆಲವು ವಸ್ತುಗಳು ಫ್ರಿಜ್ ನಲ್ಲಿಟ್ಟು ಬಿಸಿ ಮಾಡಿ ಸೇವಿಸಿದರೆ ಅದರ ಸಂಪೂರ್ಣ ಗುಣ ಹಾಳಾಗುತ್ತದೆ. ಅವುಗಳು ಯಾವುವು ಎಂದಿರಾ?
ಹಿಂದಿನ ದಿನದ ಅನ್ನ ಉಳಿದರೆ ಅದನ್ನು ಫ್ರಿಜ್ ನಲ್ಲಿಟ್ಟು ಮರುದಿನ ತಿನ್ನುತ್ತೀರಾ? ಇಂದೇ ನಿಮ್ಮ ಅಭ್ಯಾಸವನ್ನು ದೂರಮಾಡಿ. ಅದರಲ್ಲಿರುವ ಬ್ಯಾಕ್ಟೀರಿಯಾವೊಂದು ನಿಶ್ಚಿತ ಅವಧಿಯ ಬಳಿಕ ಅನ್ನ ಎಲ್ಲೇ ಇದ್ದರೂ ಅದನ್ನು ಹಾಳು ಮಾಡುತ್ತದೆ.
ಹಾಳಾದ ಆಲೂಗಡ್ಡೆ ಪಲ್ಯವನ್ನು ಎಂದಿಗೂ ತಿನ್ನದಿರಿ. ಇದನ್ನು ಮತ್ತೆ ಬಿಸಿ ಮಾಡುವುದರಿಂದ ಹಳಸಿದ ವಾಸನೆಯೇನೋ ದೂರವಾಗಬಹುದು, ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮಾತ್ರವಲ್ಲ ಲೂಸ್ ಮೋಷನ್ ಕೂಡಾ ಆರಂಭವಾಗಬಹುದು.
ಹಳಸಿದ ಮೊಟ್ಟೆಯನ್ನು ಸೇವಿಸುವುದರಿಂದಲೂ ಇದೇ ಪ್ರಭಾವಗಳು ಕಾಣಿಸಿಕೊಳ್ಳಬಹುದು. ಪಾಲಕ್ ಸೊಪ್ಪನ್ನು ಅಷ್ಟೇ, ತಾಜಾ ಇರುವಾಗಲೇ ಸವಿಯಿರಿ. ಉಳಿದ ಪಲ್ಯವನ್ನು ಮತ್ತೆ ಬಿಸಿ ಮಾಡಿ ಸವಿಯದಿರಿ. ಇದೇ ನಿಯಮವನ್ನು ಬೀಟ್ ರೂಟ್ ಗೂ ಅನ್ವಯಿಸಿ.