ರಜಾ ದಿನಗಳಲ್ಲಿ ಸಾಮಾನ್ಯವಾಗಿ ಬಹುತೇಕರು ವಿದೇಶ ಪ್ರವಾಸ ಮಾಡ್ತಾರೆ. ಅಥವಾ ಪರ್ವತ ಪ್ರದೇಶಗಳಿಗೆ ರಜೆ ಕಳೆಯಲು ತೆರಳ್ತಾರೆ. ಈ ಸಮಯದಲ್ಲಿ ವಿಮಾನ ಪ್ರಯಾಣದ ವೇಳೆ ಆತಂಕ ರಹಿತವಾಗಿ, ಆರಾಮಾಗಿ ತೆರಳಲು ಕೆಲವೊಂದು ವಸ್ತುಗಳನ್ನು ಜೊತೆಗಿಟ್ಟುಕೊಳ್ಳಿ.
ವಿಮಾನ ಏರುವ ಮುನ್ನ ಐ ಮಾಸ್ಕ್ ಹಾಗೂ ಹೇರ್ ಪ್ಲಗ್ ನಿಮ್ಮ ಜೊತೆಗಿದ್ಯಾ ಅಂತಾ ಚೆಕ್ ಮಾಡಿಕೊಳ್ಳಿ. ವಿಮಾನದಲ್ಲಿರುವಷ್ಟು ಸಮಯವೂ ನಿಮಗೆ ಫೋನ್ ಕಾಲ್, ಮೆಸೇಜ್, ಇಮೇಲ್ ಗಳ ಕಾಟ ಇರೋದಿಲ್ಲ. ಹಾಗಾಗಿ ಐ ಮಾಸ್ಕ್ ಮತ್ತು ಹೇರ್ ಪ್ಲಗ್ ಇಟ್ಕೊಂಡ್ರೆ ಆ ಸಮಯವನ್ನು ವ್ಯರ್ಥ ಮಾಡದೆ ನಿದ್ದೆ ಮಾಡಬಹುದು.
ನಿಮ್ಮದು ಸುದೀರ್ಘ ವಿಮಾನ ಪ್ರಯಾಣವಾಗಿದ್ದರೆ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡೊಯ್ಯಲು ಮರೆಯಬೇಡಿ. ಇದ್ರಿಂದ ನಿಮಗೆ ಬೋರ್ ಎನಿಸುವುದಿಲ್ಲ, ಉಪಯುಕ್ತ ಮಾಹಿತಿಗಳನ್ನು ಕೂಡ ಪಡೆಯಬಹುದು. ಪುಸ್ತಕ ಮತ್ತು ಪತ್ರಿಕೆಗಳನ್ನು ನೀವು ಮೊದಲೇ ಖರೀದಿಸಿ ಇಟ್ಟುಕೊಳ್ಳಿ. ಯಾಕಂದ್ರೆ ವಿಮಾನದಲ್ಲಿ ಅವು ಬಹಳ ದುಬಾರಿ.
ಪ್ರಯಾಣಕ್ಕೆ ಅನುಕೂಲವಾಗುವಂತಹ ತಲೆದಿಂಬನ್ನು ತೆಗೆದುಕೊಂಡು ಹೋಗಿ. ಅದರಲ್ಲೂ ಕತ್ತು ನೋವು ಇರುವವರು ತಲೆದಿಂಬನ್ನು ಕೊಂಡೊಯ್ಯಲು ಮರೆಯಲೇಬಾರದು. ವಿಮಾನ ಪ್ರಯಾಣ ಮಾಡುವಾಗ ಹೈಜೆನಿಕ್ ವೈಪ್ಸ್ ತೆಗೆದುಕೊಂಡು ಹೋಗಿ. ಯಾಕಂದ್ರೆ ಸಾರ್ವಜನಿಕ ಶೌಚಾಲಯ ಸ್ವಚ್ಛವಾಗಿರುವುದಿಲ್ಲ. ಟಾಯ್ಲೆಟ್ ಸೀಟ್ ಗಳ ಮೇಲೆ ಹಾನಿಕಾರಕ ಬ್ಯಾಕ್ಟೀರಿಯಾಗಳಿರುತ್ತವೆ.
ಮಧುರ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ವಿಮಾನದ ಆಗಮನ ವಿಳಂಬವಾದ್ರೆ ಅಲ್ಲಿ ನಿಮಗೆ ಮನರಂಜನೆಯ ಇನ್ಯಾವುದೇ ಮಾಧ್ಯಮಗಳಿರುವುದಿಲ್ಲ. ಆಗ ಆರಾಮಾಗಿ ಹಾಡುಗಳನ್ನು ಕೇಳಬಹುದು. ನಿಮ್ಮ ಪಕ್ಕದ ಸೀಟ್ ನಲ್ಲಿ ವಾಚಾಳಿಗಳೇನಾದ್ರೂ ಇದ್ರೆ ಅವರಿಂದ ತಪ್ಪಿಸಿಕೊಳ್ಳಲು ಹೆಡ್ ಫೋನ್ ಹಾಕಿಕೊಂಡು ಕೂರಬಹುದು. ಹಾಗಾಗಿ ಒಳ್ಳೊಳ್ಳೆ ಹಾಡುಗಳ ಸಂಗ್ರಹ ಮಾಡಿಟ್ಟುಕೊಳ್ಳಿ.