alex Certify ಖಾಸಗಿ ವಿಡಿಯೋ ಲೀಕ್ : ಮತ್ತೆ ಮೌನ ಮುರಿದ ನಟಿ ಶ್ರುತಿ ನಾರಾಯಣ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ವಿಡಿಯೋ ಲೀಕ್ : ಮತ್ತೆ ಮೌನ ಮುರಿದ ನಟಿ ಶ್ರುತಿ ನಾರಾಯಣ್ !

ತಮಿಳು ಕಿರುತೆರೆಯ ಜನಪ್ರಿಯ ನಟಿ ಶ್ರುತಿ ನಾರಾಯಣ್ ಅವರ ಖಾಸಗಿ ವಿಡಿಯೋ ಸೋರಿಕೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಿಡಿಯೋ ಸೋರಿಕೆಯಾದ ಬಳಿಕ ತೀವ್ರ ಆಘಾತಕ್ಕೆ ಒಳಗಾಗಿದ್ದ ಶ್ರುತಿ ಇದೀಗ ಆರೋಪಿ ವಿರುದ್ಧ ಕಿಡಿಕಾರಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಶ್ರುತಿ ನಾರಾಯಣ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಘಟನೆಯಿಂದ ತೀವ್ರ ಆಘಾತಕ್ಕೆ ಒಳಗಾದ ಶ್ರುತಿ, ವಿಡಿಯೋ ಹಂಚಿಕೊಳ್ಳದಂತೆ ಜನರಲ್ಲಿ ಮನವಿ ಮಾಡಿದ್ದರು.

ಇದೀಗ, ಈ ಘಟನೆಯ ಬಗ್ಗೆ ಮತ್ತೊಮ್ಮೆ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ ಶ್ರುತಿ, “ಈ ಸಮಯದಲ್ಲಿ, ವಿಷಯಗಳು ಕೈಮೀರಿ ಹೋಗುತ್ತಿವೆ. ವಿಡಿಯೋ ಹರಡಿದ ನಾಚಿಕೆಗೇಡಿ ವ್ಯಕ್ತಿಯ ಬಗ್ಗೆ ಯಾರೂ ಮಾತನಾಡಲು ಬಯಸುವುದಿಲ್ಲ. ಹುಡುಗಿಯ ಜೀವನವನ್ನು ಹಾಳು ಮಾಡಿದ ನಂತರ ಅವನು ಪತ್ತೆಯಾಗದೆ ಪರದೆಯ ಹಿಂದೆ ಆರಾಮವಾಗಿ ಸಮಯ ಕಳೆಯುತ್ತಿದ್ದಾನೆ. ಅವನೊಬ್ಬನೇ ಅಲ್ಲ, ವಿಡಿಯೋ ಹರಡುವಲ್ಲಿ ನಿರತರಾಗಿರುವ ಇತರರು ಸಹ. ಇದು ಹುಡುಗಿಯ ಜೀವನದ ಮೇಲೆ ಮಾನಸಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂದು ಯೋಚಿಸಲು ನಿಮಗೆ ಎರಡು ಸೆಕೆಂಡುಗಳಾದರೂ ಸಮಯವಿಲ್ಲವೇ ? ಎಲ್ಲದರಲ್ಲೂ ಕಾಮಕ್ಕಾಗಿ ಹೊಂಚು ಹಾಕುವವರೆಲ್ಲಾ ಪುರುಷರೆಂದು ಈ ಘಟನೆ ಸಾಬೀತುಪಡಿಸುತ್ತದೆ. ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ತೊಂದರೆಗೀಡಾಗಿರುವ ಹುಡುಗಿ ನಾನು. ಮಾನವೀಯತೆಗಾಗಿ ದಯವಿಟ್ಟು ಇದನ್ನು ನಿಲ್ಲಿಸಿ ಎಂದು ನಾನು ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಉದ್ಯಮದೊಳಗಿನ ಯಾರೋ ಒಬ್ಬರು ನಟನೆಯ ವಿಡಿಯೋ ಮಾಡಲು ಆಕೆಯನ್ನು ಮೋಸಗೊಳಿಸಿ ನಂತರ ಆ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹರಡಿದ್ದಾರೆ ಎಂದು ವದಂತಿಗಳಿವೆ. ಈ ಘಟನೆಯಲ್ಲಿ ಯಾರ ವಿರುದ್ಧವಾದರೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಯೇ ಎಂಬುದು ತಿಳಿದಿಲ್ಲ. ಈ ಘಟನೆ ತಮಿಳು ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...