ಶ್ರೀಮಂತರಾಗುವ ಕನಸನ್ನ ಪ್ರತಿಯೊಬ್ಬರು ಕಾಣ್ತಾರೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ರೂ ಕೈಗೆ ಬಂದ ಹಣ ನಿಲ್ಲೋದಿಲ್ಲ. ಮನೆಯಲ್ಲಿ ಬಡತನ ಸದಾ ನೆಲೆಸಿರುತ್ತದೆ. ಇದಕ್ಕೆ ವಾಸ್ತು ದೋಷದ ಜೊತೆ ಮನೆ ಅಥವಾ ಮನೆ ಆಸುಪಾಸಿರುವ ಕೆಲವೊಂದು ವಸ್ತುಗಳು ಕಾರಣವಾಗುತ್ತವೆ.
ಮನೆಯ ಆರ್ಥಿಕ ದುಃಸ್ಥಿತಿಗೆ ಕಾರಣವಾಗುವ ಹಾಗೂ ಶಾಂತಿ ಕದಡುವ ವಸ್ತುಗಳು ಮನೆ ಆಸುಪಾಸಿದ್ದರೆ ತಕ್ಷಣ ಅದನ್ನು ತೆಗೆದು ಹಾಕಿ. ಮನೆ, ಅಂಗಡಿಯೊಳಗೆ ಅಥವಾ ಆಸುಪಾಸು ಪಾರಿವಾಳದ ಗೂಡಿದ್ದರೆ ಅದನ್ನು ತೆಗೆದು ಹಾಕಿ. ಇದು ಅಸ್ಥಿರತೆಗೆ ಕಾರಣವಾಗುತ್ತದೆ. ಬಡತನ ಕಾಡಲು ಕಾರಣವಾಗುತ್ತದೆ.
ಮನೆಯ ಗೋಡೆ ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ. ಇದು ದುರ್ಭಾಗ್ಯ ಹಾಗೂ ಬಡತನವನ್ನು ಆಕರ್ಷಿಸುತ್ತದೆ.
ಮನೆಯಲ್ಲಿ ಜೇಡ ಬಲೆ ಕಟ್ಟಿದ್ದರೆ ಕಂಡ ತಕ್ಷಣ ತೆಗೆದು ಹಾಕಿ. ಮುಂದೆ ಎಂದೂ ಜೇಡ ಬಲೆ ಕಟ್ಟದಂತೆ ನೋಡಿಕೊಳ್ಳಿ.
ಮನೆಯ ಮುಂದಿರುವ ಗಿಡದಿಂದ ಒಣಗಿದ ಎಲೆಗಳು ನೆಲಕ್ಕೆ ಬಿದ್ದಿದ್ದರೆ ಅದನ್ನು ತೆಗೆದು ಹಾಕಿ. ಇದು ಕೂಡ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.
ಜೇನುತುಪ್ಪ ತಿನ್ನಲು ಸಿಹಿ. ಆದ್ರೆ ಮನೆ ಮತ್ತು ಅಂಗಡಿ ಬಳಿ ಜೇನು ಗೂಡು ಕಟ್ಟಿದ್ರೆ ಅದು ಅಶುಭ. ಹಣ ವಿಪರೀತ ಖರ್ಚಾಗುವ ಲಕ್ಷಣ.