
ಮನೆಗೆ ನುಗ್ಗಿ ಕಳ್ಳರು ಎಲ್ಲವನ್ನೂ ದೋಚಿ ಪರಾರಿಯಾದ್ರೂ ಅವರ ಪ್ರತಿ ಚಲನವಲನ ರೆಕಾರ್ಡ್ ಆಗಿದ್ದು ಕಳ್ಳರು ಸಿಕ್ಕಿಬಿದ್ದಿದ್ದಾರೆ. ಕಳ್ಳರ ಕೃತ್ಯವೆಲ್ಲವೂ ರೆಕಾರ್ಡ್ ಆಗಿರೋದು ಅವರು ಕದ್ದ ವಸ್ತುವಿನಿಂದ್ಲೇ .
ಅಚ್ಚರಿಯಾದ್ರೂ ಇಂತಹ ಘಟನೆ ಅಮೆರಿಕಾದಲ್ಲಿ ನಡೆದಿದೆ. ಮನೆಯೊಂದರಲ್ಲಿ ಕದ್ದಿದ್ದ ಕ್ಯಾಮರಾದ ಸಹಾಯದಿಂದ್ಲೇ ಅವರೆಲ್ಲರೂ ಸಿಕ್ಕಿಹಾಕಿಕೊಂಡಿದ್ದಾರೆ. ಕದ್ದ ಸಿಸಿ ಕ್ಯಾಮೆರಾವನ್ನ ಕಳ್ಳರು ತಮ್ಮ ಅಪಾರ್ಟ್ ಮೆಂಟ್ ಗೆ ತೆಗೆದುಕೊಂಡು ಹೋಗಿದ್ದರು. ಕ್ಯಾಮೆರಾ ಆನ್ ಆಗಿ ಇದ್ದಿದ್ರಿಂದ ಕಳ್ಳರ ಎಲ್ಲ ಚಲನವಲನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಇದರಿಂದಾಗಿ ಕಳ್ಳರನ್ನು ಬಂಧಿಸಲಾಗಿದೆ.
ವರದಿಯ ಪ್ರಕಾರ ಯುಎಸ್‌ನ ಮಿಲ್ವಾ ಕೀಯಲ್ಲಿರುವ ಆಸ್ತಿಯ ಉಸ್ತುವಾರಿ ವಹಿಸಿದ್ದ ಎರಿಕಾ ವಿನ್‌ಶಿಪ್ ಭದ್ರತಾ ದೃಶ್ಯಗಳಲ್ಲಿ ಇಡೀ ಕಳ್ಳತನವನ್ನು ವೀಕ್ಷಿಸಿದ್ದಾರೆ.
ಕಳ್ಳರು ಕ್ಯಾಮೆರಾವನ್ನು ಎತ್ತಿಕೊಂಡು ‘ಇದು ಏನು?’ ಎಂದು ನೋಡುತ್ತಾ ಬ್ಯಾಗ್ ಒಳಕ್ಕೆ ಹಾಕಿಕೊಂಡರು.
ಸುಮಾರು 8 ಲಕ್ಷ ರೂ. ದರೋಡೆ ಮಾಡಿದ ಅವರು ಕದ್ದ ಹಿಡನ್ ಕ್ಯಾಮೆರಾವನ್ನೂ ಹೊತ್ತೊಯ್ದರು. ಅದು ಆನ್ ಆಗಿದಿದ್ರಿಂದ ಅವರ ಪ್ರತಿಯೊಂದು ಚಲನೆಯನ್ನು ರೆಕಾರ್ಡ್ ಮಾಡಿತ್ತು.
ಕಳ್ಳರ ಗುಂಪಿನಲ್ಲಿದ್ದ ಓರ್ವರು ಕ್ಯಾಮೆರಾವನ್ನ ನಾಶಮಾಡುವವರೆಗೆ , ಅದು 8 ದಿನಗಳ ಕಾಲ ಕಳ್ಳರ ಮನೆಯಿಂದ ಲೈವ್ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಇನ್ನೂ ನಡೆಯುತ್ತಿದೆ.