
ಪೆರುವಿನಲ್ಲಿನ ಕಳ್ಳರು ಶೂ ಅಂಗಡಿಯಲ್ಲಿ ದರೋಡೆ ಮಾಡಿದ್ದಾರೆ. ಆದರೆ, ಅವರು 200 ಕ್ಕೂ ಹೆಚ್ಚು ಬೂಟುಗಳನ್ನು ಕದ್ದಿದ್ದು, ಕದ್ದ ಶೂಗಳೆಲ್ಲವೂ ಒಂದೇ ಕಾಲಿಗೆ ಹಾಕಿಕೊಳ್ಳುವ ಶೂಗಳಾಗಿವೆ.
ಪೆರುವಿಯನ್ ನಗರದ ಹುವಾನ್ಕಾಯೊದಲ್ಲಿ ಮೂವರು ಶೂ ಅಂಗಡಿಯೊಂದಕ್ಕೆ ನುಗ್ಗಿ ಶೋ ಕೇಸ್ ನಲ್ಲಿದ್ದ 200 ಕ್ಕೂ ಹೆಚ್ಚು ಶೂಗಳನ್ನು ಕದ್ದಿದ್ದಾರೆ.
ಶೂ ಅಂಗಡಿ ಮಾಲೀಕರ ಪ್ರಕಾರ, ಶೂಗಳು $ 13,000 (10 ಲಕ್ಷ ರೂ.) ಗಿಂತ ಹೆಚ್ಚು ಮೌಲ್ಯದ್ದಾಗಿವೆ. ಕಳ್ಳರು ಬಲಗಾಲಿನ ಬೂಟುಗಳನ್ನು ಮಾತ್ರ ಕದ್ದಿರುವುದರಿಂದ ಅವುಗಳನ್ನು ಮಾರಲು ಹೆಣಗಾಡಬಹುದು.
ದರೋಡೆ ಯತ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ ಚಪ್ಪಲಿ ಅಂಗಡಿಗೆ ಕಳ್ಳರು ನುಗ್ಗುತ್ತಿರುವುದು ದೃಶ್ಯಾವಳಿಯಲ್ಲಿದೆ. ಕಳ್ಳರು ಕಳ್ಳತನ ಮಾಡುವಾಗ ಅವರು ಏನನ್ನು ದೋಚುತ್ತಿದ್ದಾರೆ ಎಂಬುದನ್ನು ಗಮನಿಸಲಿಲ್ಲವೋ ಅಥವಾ ಅವರು ಬಲಗಾಲಿನ ಶೂಗಳನ್ನು ಮಾತ್ರ ಕದಿಯಲು ಉದ್ದೇಶಿಸಿದ್ದರೆ ಎಂಬುದು ಸ್ಪಷ್ಟವಾಗಿಲ್ಲ.
ಸ್ಥಳೀಯ ಪೊಲೀಸ್ ಮುಖ್ಯಸ್ಥ ಎಡುವಾನ್ ಡಿಯಾಜ್ ಪೆರುವಿಯನ್, ನಾವು ಘಟನಾ ಸ್ಥಳದಲ್ಲಿ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಈ ದರೋಡೆಯ ವಿಶೇಷವೆಂದರೆ ಬಲ ಪಾದದ ಬೂಟುಗಳನ್ನು ಮಾತ್ರ ಕಳವು ಮಾಡಲಾಗಿದೆ. ದೃಶ್ಯಗಳು ಮತ್ತು ಫಿಂಗರ್ ಪ್ರಿಂಟ್ ಗಳೊಂದಿಗೆ ನಾವು ಅವರನ್ನು ಪತ್ತೆಹಚ್ಚಲು ಕ್ರಮಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.