ಇದೊಂದು ವಿಚಿತ್ರ ಕಳ್ಳತನ ಪ್ರಕರಣ. ಕಳ್ಳರಿಗೂ ಭಯ ಭಕ್ತಿ ಇದೆ ಅನ್ನೊದು ಈ ಪ್ರಕರಣ ನೋಡ್ತಿದ್ರೇನೆ ಗೊತ್ತಾಗುತ್ತೆ. ಅಷ್ಟಕ್ಕೂ ಏನಾಯ್ತು ಅಂತಿರಾ..?
ಕೇರಳದ ಕೊಲ್ಲಂ ಜಿಲ್ಲೆಯ ಬ್ಯಾಂಕ್ವೊಂದಕ್ಕೆಕಳ್ಳರು ದರೋಡೆ ಮಾಡೋದಕ್ಕೆ ಸೈಲೆಂಟಾಗಿ ನುಗ್ಗಿದ್ದಾರೆ. ಆದರೆ ಅದಕ್ಕೂ ಮುಂಚೆ ದೇವರಿಗೆ ವೀಳ್ಯದೆಲೆ, ಮದ್ಯ ಇಟ್ಟು ಪೂಜೆ ಮಾಡಿ ನೇವೇದ್ಯ ಇಟ್ಟಿದ್ದಾರೆ. ಕೊನೆಗೆ 30 ಲಕ್ಷ ಮೌಲ್ಯದ ಚಿನ್ನ ಮತ್ತು 4 ಲಕ್ಷ ರೂಪಾಯಿ ಲಪಟಾಯಿಸಿಕೊಂಡು ಪರಾರಿಯಾಗಿದ್ದಾರೆ.
ಪಠಾಣಪುರಂ ಜಂಕ್ಷನ್ನಲ್ಲಿರೋ `ಪಠಾಣಪುರಂ ಬ್ಯಾಂಕರ್ಸ್’ ಖಾಸಗಿ ಬ್ಯಾಂಕ್ಗೆ ಹೋಗಿ ಲೂಟಿ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಈ ಪ್ರಕರಣ ಕುರಿತಾಗಿ ಬ್ಯಾಂಕ್ ಮಾಲೀಕರಾದ ರಾಮಚಂದ್ರನ್ ನಾಯರ್ ಪೊಲೀಸರಿಗೆ ದೂರು ಕೊಟ್ಟಿದ್ಧಾರೆ.
ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಸ್ಥಳಕ್ಕೆ ಹೋಗಿ ತನಿಖೆ ನಡೆಸಿದ್ದಾರೆ. ಅಲ್ಲಿ ಕಳ್ಳರು ವೀಳ್ಯದೆಲೆ, ಮದ್ಯ ಇಟ್ಟು ಪೂಜೆ ಮಾಡಿರೋದು ಪೊಲೀಸರ ಗಮನಕ್ಕೂ ಬಂದಿದೆ. ಅದರ ಜೊತೆಗೆ ಸುಣ್ಣ ಮತ್ತು ಅರಿಶಿನ ಹಚ್ಚಿರೋ ದಾರ ಕಟ್ಟಿರೋ ಈಟಿ ಕಾಣಿಸಿದೆ. ಅಲ್ಲಲ್ಲಿ ಹರಡಿರೋ ಮನುಷ್ಯರ ಕೂದಲು ನೋಡ್ತಿದ್ರೆ ಇಲ್ಲಿ ಮಾಟ-ಮಂತ್ರ ಮಾಡಿರಬಹುದು ಅಂತ ಅಂದಾಜು ಮಾಡಲಾಗಿದೆ.
ಕಳ್ಳರು ಈ ರೀತಿ ಮಾಡುವುದರ ಹಿಂದಿರೋ ಉದ್ದೇಶ ಪೊಲೀಸರ ಕಣ್ತಪ್ಪಿಸೋದು. ಸಿನೆಮಾ ಸ್ಟೈಲ್ನಲ್ಲಿ ಈ ಕಳ್ಳರು ಗೋಡೆಗೆ ಒಂದು ಪೋಸ್ಟರ್ ಅಂಟಿಸಿ `ನಾನು ಅಪಾಯಕಾರಿ ನನ್ನನ್ನು ಅನುಸರಿಸಬೇಡಿ` ಅನ್ನೊ ಸಂದೇಶವನ್ನ ಬರೆದಿಟ್ಟು ಹೋಗಿದ್ದಾರೆ. ಇದೆಲ್ಲ ಸಾಕ್ಷಿಗಳನ್ನ ಇಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.