ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಪೊಲೀಸರ ಮೇಲೆ ಕಲ್ಲು ತೂರಿ ಕಳ್ಳರು ಪರಾರಿಯಾದ ಘಟನೆ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ನಡೆದಿದೆ.
ಪಿಎಸ್ಐ ಗುಂಡು ಹಾರಿಸಿದರೂ ಲೆಕ್ಕಿಸದೇ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರಿದ್ದ ವಾಹನದ ಟೈಯರ್ ಗೆ 3 ಗುಂಡು, ಗಾಳಿಯಲ್ಲಿ ಎರಡು ಸುತ್ತು ಫೈರಿಂಗ್ ಮಾಡಲಾಗಿದೆ.
ನಾಯಕನಹಟ್ಟಿ ಠಾಣೆ ಪಿಎಸ್ಐ ಶಿವಕುಮಾರ್ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲು ತೂರಿ ಕಳ್ಳರು ಪರಾರಿಯಾಗಿದ್ದಾರೆ. ಬೋಲೇರೋ ವಾಹನದಲ್ಲಿ ಬಂದಿದ್ದ ಕಳ್ಳರು ಆಂಧ್ರ ಪ್ರದೇಶದತ್ತ ಪರಾರಿಯಾಗಿದ್ದಾರೆ. ಆಂಧ್ರ ಮೂಲದ ಹಂದಿ ಕಳ್ಳರು, ಕುರಿಗಳ್ಳರು ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಚಿತ್ರದುರ್ಗ ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.