alex Certify ಕಾಡಿದ ದುಃಸ್ವಪ್ನ: ಕದ್ದ ವಿಗ್ರಹಗಳನ್ನು ಮರಳಿಸಿದ ಕಳ್ಳರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡಿದ ದುಃಸ್ವಪ್ನ: ಕದ್ದ ವಿಗ್ರಹಗಳನ್ನು ಮರಳಿಸಿದ ಕಳ್ಳರು….!

ಕಳ್ಳತನಕ್ಕೂ ಕನಸುಗಳಿಗೆ ಏನು ಸಂಬಂಧ ? ಇದಕ್ಕೆ ಕಳ್ಳರು ಉತ್ತರ ನೀಡಿದ್ದಾರೆ. ದೇವಾಲಯದ ವಿಗ್ರಹಗಳನ್ನು ಕದ್ದ ನಂತರ ಅವರ ಕನಸಿನಲ್ಲಿ ಆತಂಕ ಸೃಷ್ಟಿಯಾಗುವ ದೃಶ್ಯಗಳು ಬಂದು ಹೋಗಿವೆ.

ಇದರಿಂದ ಬೆದರಿದ ಕಳ್ಳರು ಕದ್ದ ವಿಗ್ರಹಗಳನ್ನು ದೇವಾಲಯದ ಮುಖ್ಯಸ್ಥರ ಮನೆಯ ಬಳಿ ಇಟ್ಟು ಹೋಗಿದ್ದಾರೆ. ಇಂತಹ ಘಟನೆ ನಡೆದದ್ದು ಚಿತ್ರಕೂಟದ ಪುರಾತನವಾದ ಬಾಲಾಜಿ ದೇವಾಲಯದಲ್ಲಿ.

ಇಲ್ಲಿನ 16 ಅಷ್ಟಧಾತು ವಿಗ್ರಹಗಳನ್ನು ಕಳ್ಳರು ಕದ್ದೊಯ್ದಿದ್ದರು. ಇವುಗಳ ಬೆಲೆ ಹಲವು ಕೋಟಿ ರೂಪಾಯಿಗಳಷ್ಟಿತ್ತು. ಈ ಬಗ್ಗೆ ದೇವಾಲಯದ ಸಿಬ್ಬಂದಿ ಮಹಾಂತ್ ರಾಮಬಾಲಕ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು.

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸ: ಅಧ್ಯಯನದಲ್ಲಿ ಬಹಿರಂಗ

ದೂರು ದಾಖಲಾದ ಕೆಲವೇ ದಿನಗಳಲ್ಲಿ ಅಚ್ಚರಿ ಕಾದಿತ್ತು. ಮಹಾಂತ ರಾಮಬಾಲಕ್ ಅವರ ಮನೆಯ ಬಳಿ ಕಳವಾಗಿದ್ದ 16 ವಿಗ್ರಹಗಳ ಪೈಕಿ 14 ವಿಗ್ರಹಗಳನ್ನು ತಂದಿಡಲಾಗಿತ್ತು. ಈ ವಿಗ್ರಹಗಳೊಂದಿಗೆ ಒಂದು ಪತ್ರವೂ ದೊರೆತ್ತಿತ್ತು. ಅದರಲ್ಲಿ ಕಳ್ಳರು, “ಈ ವಿಗ್ರಹಗಳನ್ನು ಕದ್ದಿದ್ದೆವು. ಆದರೆ, ನಮಗೆ ರಾತ್ರಿ ದುಃಸ್ವಪ್ನ ಕಾಡಿತು. ಈ ಹಿನ್ನೆಲೆಯಲ್ಲಿ ಭಯವಾಗಿಗ ನಾವು ವಿಗ್ರಹಗಳನ್ನು ವಾಪಸ್ ಮಾಡುತ್ತಿದ್ದೇವೆ’’ ಎಂದು ತಪ್ಪೊಪ್ಪಿಗೆ ಬರೆದಿದ್ದರು. ಹೀಗೆ ವಾಪಸ್ ಬಂದ ವಿಗ್ರಹಗಳನ್ನು ಪಡೆದಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...