alex Certify ಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡುವ ಮುನ್ನ ಪಬ್ ನಲ್ಲಿ ಆಹಾರ ಸೇವಿಸಿ ರಿಲ್ಯಾಕ್ಸ್ ಆದ ಕಳ್ಳ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದಿರುವ ವಿಲಕ್ಷಣ ಕಳ್ಳತನ ಪ್ರಕರಣ ಒಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳ್ಳತನ ಮಾಡುವ ಮುನ್ನ ಚೋರ, ಆರಾಮವಾಗಿ ಆಹಾರ ಸೇವಿಸಿ ಬಳಿಕ ತನ್ನ ಕೃತ್ಯ ಎಸಗಿದ್ದಾನೆ.

ಕಳ್ಳತನ ಮಾಡುವ ಸಲುವಾಗಿ ಈ ಪಬ್ ಗೆ ಬೆಳಗಿನ ಜಾವ 2.13ರ ಸುಮಾರಿಗೆ ಬಂದಿರುವ ಈತ ಸುಸ್ತಾಗದಿರಲೆಂದು ಮುಂಜಾಗ್ರತಾ ಕ್ರಮವಾಗಿ ಬಹುಶಃ ಆಹಾರ ಸೇವಿಸಿದ್ದಾನೆ ಎಂದು ಕಾಣುತ್ತದೆ.

ಬಳಿಕ ಕಳ್ಳತನ ಕೃತ್ಯವೆಸಗಿದ್ದು ಪಬ್ ಆಡಳಿತ ಮಂಡಳಿ ಈ ವಿಡಿಯೋ ಹಂಚಿಕೊಂಡ ಬಳಿಕ ಇಲ್ಲಿಗೆ ಪ್ರತಿನಿತ್ಯ ಬರುವವರು ಈತ ಪರಿಚಿತನಂತೆ ಕಾಣುತ್ತಿದ್ದಾನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಪೊಲೀಸರು ಆತನ ಪತ್ತೆಗೆ ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...