ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 ರೂಪಾಯಿ ಮೌಲ್ಯದ ಒಡವೆ ಹಾಗೂ ತಂದೆಗೆ 40,000 ರೂಪಾಯಿ ಮೌಲ್ಯದ ಸೆಕೆಂಡ್-ಹ್ಯಾಂಡ್ ಕಾರು ಕೊಡಿಸಿದ್ದಾನೆ.
ನಾಗ್ಪುರದ ಇಂದಿರಾ ಗಾಂಧಿ ನಗರದ ಬಾರಾನಲ್ ಚೌಕದಲ್ಲಿರುವ ಬ್ಯಾಂಕೊಂದರಲ್ಲಿ ಅಜಯ್ ಹಾಗೂ ಆತನ ಸಹವರ್ತಿ ಪ್ರದೀಪ್ ಠಾಕೂರ್ ಕಳ್ಳತನ ಮಾಡಿದ್ದಾರೆ.
ನೀರಿನಲ್ಲಿ ಕುಸಿದ ಆಮ್ಲಜನಕ ಪ್ರಮಾಣ: ನೂರಾರು ಮೀನುಗಳ ಮಾರಣಹೋಮ
ತನ್ನ ’ಸಂಪಾದನೆಯಿಂದ’ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಇರಾದೆ ಅಜಯ್‌ನದ್ದಾದರೆ, ಪ್ರದೀಪ್‌ಗೆ ತಾನೊಬ್ಬ ನಟೋರಿಯಸ್ ಡಕಾಯಿತನಾಗಿ, ಆ ರೀತಿಯಲ್ಲಿ ತನ್ನನ್ನು ಚಿಕ್ಕ ವಯಸ್ಸಿನಲ್ಲೇ ದೂರ ತಳ್ಳಿದ ಹೆತ್ತವರ ವಿರುದ್ಧ ಸೇಡು ತೀರಿಸಿಕೊಳ್ಳುವ ಇರಾದೆ ಹೊಂದಿದ್ದ.
ಜಗತ್ತಿನ ಅತ್ಯಂತ ʼದುಬಾರಿʼ ಮಾವಿನ ಹಣ್ಣಿನ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ಬ್ಯಾಂಕಿನಲ್ಲಿ ಲೂಟಿ ಮಾಡಿದ ದುಡ್ಡಿನಲ್ಲಿ ದುಬಾರಿ ಮೊಬೈಲ್ ಖರೀದಿಸಿದ ಇಬ್ಬರೂ, ಮತ್ತೊಂದು ಸೆಕೆಂಡ್-ಹ್ಯಾಂಡ್ ಕಾರು ಖರೀದಿ ಮಾಡಿಕೊಂಡು ರಾಜಸ್ಥಾನಕ್ಕೆ ಹೋಗಿ ಅಲ್ಲೂ ಸಹ ಡಕಾಯಿತಿ ಮಾಡಲು ಸ್ಕೆಚ್ ಹಾಕಿದ್ದರು. ಸ್ಥಳೀಯ ಪೊಲೀಸರಿಗೆ ಈ ಇಬ್ಬರ ಸುಳಿವು ಚೆನ್ನಾಗಿ ಇದ್ದ ಕಾರಣ ಅನ್ಯ ರಾಜ್ಯದಲ್ಲಿ ತಮ್ಮ ಕೆಲಸ ಮುಂದುವರೆಸಲು ಇಬ್ಬರೂ ನಿರ್ಧರಿಸಿದ್ದರು.
ತಮ್ಮೀ ಕೃತ್ಯದ ಬಗ್ಗೆ ಭಾರೀ ಜಂಭದಿಂದ ಹೇಳಿಕೊಳ್ಳುತ್ತಾ ಬಂದಿದ್ದ ಈ ಇಬ್ಬರೂ ದ್ವಿಚಕ್ರ ವಾಹನವೊಂದನ್ನು ಕದ್ದ ಆರೋಪದಲ್ಲಿ ತಮಗೆ ಬೇಲ್ ಕೊಡಿಸಿದ ವಕೀಲರಿಗೆ ಒಂದೇ ಬಾರಿಗೆ ಭಾರೀ ದುಡ್ಡು ಕೊಟ್ಟಿದ್ದರು. ಇವನ್ನೆಲ್ಲಾ ಆಧರಿಸಿ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.