ದೆಹಲಿ: ಯಮುನಾ ನದಿಯು ಸಂಪೂರ್ಣ ನೊರೆಯಿಂದ ಆವೃತವಾಗಿದೆ. ನದಿಯಲ್ಲಿ ವಿಷಕಾರಿ ಮಲಿನವು ಹರಿಯುತ್ತಿರುವ ದೃಶ್ಯವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಂಡು ಬಂದಿದೆ.
ತಜ್ಞರ ಪ್ರಕಾರ, ಡಿಟರ್ಜೆಂಟ್ ಗಳು ಸೇರಿದಂತೆ ಕೈಗಾರಿಕೆಗಳ ವಿಷಕಾರಿ ಮಾಲಿನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಹೊರಬಿಡಲಾಗಿದೆ. ಫಾಸ್ಫೆಟ್ ಅಂಶವು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಸೇರಿರುವುದರಿಂದ ಸಂಪೂರ್ಣ ನೊರೆಯಿಂದ ಆವೃತವಾಗಿದೆ.
2019ರಲ್ಲಿ ಯಮುನಾ ನದಿಯಲ್ಲಿ ಹರಿದ ವಿಷಕಾರಿ ಮಲಿನವು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ಇನ್ನು ತಜ್ಞರ ಪ್ರಕಾರ, ಇಂಥ ದೃಶ್ಯ ಯಮುನಾದಲ್ಲಿ ಸಾಮಾನ್ಯವಾಗಿದೆ. ಆದರೆ ಕಳೆದ ಐದಾರು ವರ್ಷಗಳಿಂದ ವಿಷಕಾರಿ ಮಲಿನ ಹರಿಯುತ್ತಿರುವ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ದೆಹಲಿ ಸರ್ಕಾರ ನದಿಯಲ್ಲಿ ವಿಷಕಾರಿ ಮಲಿನಕ್ಕೆ ಕಡಿವಾಣ ಹಾಕಲು ಒಂಭತ್ತು ಅಂಶಗಳ ಯೋಜನೆ ರೂಪಿಸಿತ್ತು.
ಲಸಿಕೆ ಸ್ವೀಕರಿಸಲು ಬೇಜವಾಬ್ದಾರಿತನ ತೋರಿ ನರಕಯಾತನೆ ಅನುಭವಿಸಿದ ಯುವಕ….!
ಇನ್ನು ಈ ಹಿಂದೆ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲೂ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೈಗಾರಿಕೆಗಳ ಕೊಳಚೆ ನೀರು ನದಿಗೆ ಸೇರಿದ ಪರಿಣಾಮ ಕೆರೆಯಲ್ಲಿ ನೊರೆಯುಂಟಾಗಿತ್ತು. ಇದು ಕೂಡ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು. ನದಿ, ಕೆರೆಗಳ ಸಂರಕ್ಷಣೆಗೆ ಸರಕಾರ ನಿಲ್ಲಬೇಕಿರುವುದು ಅಗತ್ಯವಿದೆ.