
ಕಣ್ಣು, ಮುಖ ಸುಂದರವಾಗಿ ಕಾಣಬೇಕೆಂದ್ರೆ ಕಣ್ಣಿನ ಹುಬ್ಬು ಕೂಡ ಮಹತ್ವದ ಪಾತ್ರವಹಿಸುತ್ತದೆ. ಹುಬ್ಬು ಸುಂದರವಾಗಿದ್ದರೆ ಮಹಿಳೆ ಎಲ್ಲರನ್ನು ಆಕರ್ಷಿಸಬಲ್ಲಳು. ಐಬ್ರೋ ಮಾಡಿದ ನಂತ್ರ ಹುಬ್ಬು ದಟ್ಟವಾಗಿ, ಕಪ್ಪಾಗಿ ಕಾಣಬೇಕೆಂದು ಕೆಲವರು ಇನ್ನಿಲ್ಲದ ಪ್ರಯತ್ನ ನಡೆಸುತ್ತಾರೆ. ಕಾಡಿಗೆ ಹಚ್ಚಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ದಕಗಳನ್ನು ಬಳಸ್ತಾರೆ. ಆದ್ರೆ ಮನೆಯಲ್ಲಿಯೇ ಹುಬ್ಬಿನ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಕ್ಯಾಸ್ಟರ್ ಆಯಿಲ್ ಬಳಸುವ ಮೂಲಕ ಹುಬ್ಬಿನ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.
ಮೊದಲು ಹುಬ್ಬನ್ನು ಶುದ್ಧವಾದ ನೀರಿನಲ್ಲಿ ಸ್ವಚ್ಛಗೊಳಿಸಿ. ನಂತ್ರ ಕೈಗೆ ಕ್ಯಾಸ್ಟರ್ ಆಯಿಲ್ ನ ಕೆಲ ಹನಿಗಳನ್ನು ತೆಗೆದುಕೊಳ್ಳಿ. ಅದನ್ನು ಐಬ್ರೋಗೆ ಹಚ್ಚಿಕೊಳ್ಳಿ. ನಂತ್ರ ನಿಧಾನವಾಗಿ ಇದನ್ನು ಮಸಾಜ್ ಮಾಡಿ. ನಂತ್ರ 30 ನಿಮಿಷ ಹಾಗೆ ಬಿಡಿ. ಸತತ 10 ದಿನಗಳ ಕಾಲ ಇದನ್ನು ಹಚ್ಚಿದ್ರೆ ಐಬ್ರೋ ದಟ್ಟವಾಗಿ, ಕಪ್ಪಾಗಿ ಬರುತ್ತದೆ.
ಇದು ಹುಬ್ಬುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಕೂದಲು ದಟ್ಟವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ.