ಟೋಕಿಯೋ ಒಲಿಂಪಿಕ್ಸ್‌ನ ಈಜು ಸ್ಫರ್ಧೆಯ ಆರ್ಹತಾ ಸುತ್ತಿನ ಪಂದ್ಯಗಳನ್ನು ಫಿಕ್ಸ್ ಮಾಡುವ ಮೂಲಕ ಉಜ್ಬೆಕಿಸ್ತಾನದ ಆಯೋಜಕರು ದ್ರೋಹ ಬಗೆದಿದ್ದಾರೆ ಎಂದು ಭಾರತದ ಈಜುಗಾರ ಎಸ್.ಪಿ. ಲಿಖಿತ್ ಆಪಾದನೆ ಮಾಡಿದ್ದಾರೆ.
ಏಪ್ರಿಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಜ್ಬೆಕಿಸ್ತಾನ ಓಪನ್ ಈಜು ಚಾಂಪಿಯನ್‌ಶಿಪ್ ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಈಜು ಸಮಿತಿ (ಫಿನಾ) ವಜಾಗೊಳಿಸಿದೆ. ಕೂಟದ ಟೈಮಿಂಗ್ ನಿರ್ವಹಣೆಯಲ್ಲಿ ಉದ್ದೇಶಪೂರಿತ ತಪ್ಪುಗಳು ಕಂಡುಬಂದಿವೆ ಎಂಬ ಆಪಾದನೆ ಮೇಲೆ ಫಿನಾ ಹೀಗೆ ಮಾಡಿದೆ.
ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ ನಿವೃತ್ತ ಡಿಜಿಪಿ..!
ಈ ಕುರಿತು ಮಾತನಾಡಿದ 21 ವರ್ಷದ ಲಿಖಿತ್, “ನಾನು ಈ ಬಗ್ಗೆ ಅಧಿಕಾರಿಯೊಬ್ಬರಿಗೆ ದೂರು ಕೊಡಲು ಹೋದಾಗ ನನ್ನನ್ನು ನಾನು ಮಾನಸಿಕ ಅಸ್ವಸ್ಥ ಎಂದು ಘೋಷಿಸಿಕೊಳ್ಳುವಂತೆ ಹೇಳಿದ್ದರು” ಎಂದಿದ್ದು, “2000ದಿಂದ ನಡೆದುಕೊಂಡು ಬಂದ ಅಭ್ಯಾಸ ಇದಾಗಿದ್ದು, ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಗೆ ಉಜ್ಬೆಕಿಸ್ತಾನದ 10 ಈಜುಗಾರರು ಆಯ್ಕೆಯಾಗುವಂತೆ ನಮಗೆ ನಿರ್ದೇಶನ ಕೊಡಲಾಗಿತ್ತು” ಎಂದಿದ್ದಾರೆ.
CBSE ಅಂಕಪಟ್ಟಿ ಕಳೆದುಹೋಗಿದೆಯೇ…? ನಕಲು ಪ್ರತಿ ಪಡೆಯಲು ಇಲ್ಲಿದೆ ಮಾಹಿತಿ
“ಹೀಟ್ಸ್‌ನ ಮೊದಲ ದಿನ ಸ್ಕೋರ್‌ಬೋರ್ಡ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಸ್ಕೋರ್‌ಶೀಟ್‌ನಲ್ಲಿ ಫಲಿತಾಂಶಗಳು ಭಿನ್ನವಾಗಿದ್ದು, ಮ್ಯಾನುವಲ್ ಆಗಿ ಎಂಟರ್ ಮಾಡುತ್ತಿದ್ದದ್ದಕ್ಕಿಂತ 5-7 ಸೆಕೆಂಡ್‌ಗಳಷ್ಟು ವ್ಯತ್ಯಾಸದಿಂದ ಕೂಡಿದ್ದವು. ಆದರೆ ಇದೊಂದು ತಾಂತ್ರಿಕ ದೋಷವಾಗಿದ್ದು, ನಂತರ ಸರಿ ಮಾಡಬಹುದು ಎಂದುಕೊಂಡಿದ್ದೆ. ಆದರೆ ಹಾಗೆ ಮಾಡಲಿಲ್ಲ” ಎಂದಿದ್ದಾರೆ.