ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದ ನವಜೋಡಿ ರಕ್ಷಣೆಗಾಗಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ದಂಪತಿಯ ಮೇಲೆ ಗುರುವಾರ ರಾತ್ರಿ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಗುಂಡು ಹಾರಿಸಲಾಗಿದೆ.
ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?
ದ್ವಾರಕಾದ ಅಂಬ್ರಾಹಿ ಗ್ರಾಮದಲ್ಲಿ ನೆಲೆಸಿದ್ದ ದಂಪತಿಯ ಮನೆಗೆ ನುಗ್ಗಿದ 7 ಮಂದಿ ದುಷ್ಕರ್ಮಿಗಳು 10 ಬಾರಿ ಫೈರಿಂಗ್ ನಡೆಸಿದ್ದಾರೆ. ಈ ದುರ್ಘಟನೆಯಲ್ಲಿ 24 ವರ್ಷದ ವಿನಯ್ ದಹಿಯಾ ಸಾವನ್ನಪ್ಪಿದ್ದರೆ 19 ವರ್ಷದ ಕಿರಣ್ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮೃತ ವಿನಯ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಾ ಸಂಸಾರ ನಡೆಸುತ್ತಿದ್ದ ಎನ್ನಲಾಗಿದೆ.
ಕಪ್ಪು ವರ್ಣೀಯನ ಹತ್ಯೆ ಮಾಡಿದ್ದ ಪೊಲೀಸ್ ಅಧಿಕಾರಿಗೆ 22.5 ವರ್ಷಗಳ ಕಾಲ ಜೈಲು..!
ಕಳೆದ ವರ್ಷ ಆಗಸ್ಟ್ 13ರಂದು ಈ ದಂಪತಿ ಕುಟುಂಬಸ್ಥರ ವಿರೋಧ ಕಟ್ಟಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಅಲ್ಲದೇ ರಕ್ಷಣೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಈ ದುರ್ಘಟನೆ ಬಳಿಕ ಪೊಲೀಸರು ಕಿರಣ್ ಕುಟುಂಬಸ್ಥರನ್ನ ವಿಚಾರಣೆಗೆ ಕರೆಸಿದ್ದಾರೆ. ಈ ಸಂಬಂಧ ಮಾತನಾಡಿದ ದಂಪತಿ ಪರ ವಕೀಲ ಅಭಿಮನ್ಯು ಕಲ್ಸೈ, ಅವರಿಬ್ಬರು ನನ್ನ ಬಳಿ ಬಂದಿದ್ದರು. ಕಿರಣ್ ಕುಟುಂಬಸ್ಥರಿಗೆ ಈ ಮದುವೆ ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ನಮಗೆ ಪದೇ ಪದೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು ಎಂದು ಹೇಳಿದ್ದಾರೆ.