alex Certify ಹೃದಯಾಘಾತದಿಂದ ಪಾರು ಮಾಡುತ್ತವೆ ಈ ʼಹಳದಿʼ ಆಹಾರಗಳು..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತದಿಂದ ಪಾರು ಮಾಡುತ್ತವೆ ಈ ʼಹಳದಿʼ ಆಹಾರಗಳು..…!

ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಜೀವನದ ಪ್ರಾರಂಭದಿಂದ ಕೊನೆಯ ಉಸಿರಿನವರೆಗೂ ಬಡಿಯುತ್ತಲೇ ಇರುತ್ತದೆ. ಹೃದಯದ ಬಗ್ಗೆ ಕಾಳಜಿ ವಹಿಸದಿದ್ದರೆ ಅಪಾಯ ನಿಶ್ಚಿತ. ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸೆಲ್ ಡಿಸೀಸ್‌ನಂತಹ ಅಪಾಯಕಾರಿ ಮತ್ತು ಮಾರಣಾಂತಿಕ ಕಾಯಿಲೆಗಳ ಅಪಾಯವಿದೆ. ಹಾಗಾಗಿ ಹೆಚ್ಚು ಎಣ್ಣೆಯುಕ್ತ ಆಹಾರ, ಕರಿದ ಪದಾರ್ಥಗಳನ್ನು ತಿನ್ನದೇ, ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸುವುದು ಬಹಳ ಮುಖ್ಯ. ಆಹಾರ ತಜ್ಞರ ಪ್ರಕಾರ ಕೆಲವೊಂದು ಹಳದಿ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಈ ಹಳದಿ ಆಹಾರಗಳು  ಹೃದಯಾಘಾತವನ್ನು ತಡೆಯುತ್ತವೆ.

ಮಾವು: ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ? ಈ ಸಿಹಿಯಾದ ಮತ್ತು ರುಚಿಕರವಾದ ಹಣ್ಣನ್ನು ನಾವು ಬೇಸಿಗೆಯಲ್ಲಿ ಆನಂದಿಸುತ್ತೇವೆ. ಮಾವಿನ ಹಣ್ಣು ಹೃದಯದ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಿರುತ್ತದೆ. ಹಾಗಾಗಿ ಇದನ್ನು ಸೇವನೆ ಮಾಡಿ.

ನಿಂಬೆ: ನಿಂಬೆಯು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಆಹಾರವಾಗಿದೆ. ಇದನ್ನು ಸಲಾಡ್‌ಗಳಿಂದ ಹಿಡಿದು ಪಾನಕದವರೆಗೆ ಬಹುತೇಕ ಎಲ್ಲಾ ತಿನಿಸುಗಳಿಗೂ ಬಳಸಲಾಗುತ್ತದೆ. ನಿಂಬೆ ರಸವನ್ನು ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ತೂಕವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಬಾಳೆಹಣ್ಣನ್ನು ಇಷ್ಟಪಡದವರು ಬಹಳ ಅಪರೂಪ. ಬಹುತೇಕ ಎಲ್ಲರೂ ಬಾಳೆಹಣ್ಣನ್ನು ತಿನ್ನುತ್ತಾರೆ. ಇದನ್ನು ಸೇವನೆ ಮಾಡುವುದು ಕೂಡ ಬಹಳ ಸುಲಭ. ಪ್ರಯೋಜನಗಳಂತೂ ಬಹಳಷ್ಟಿವೆ. ಬಾಳೆಹಣ್ಣನ್ನು ಮಿತವಾಗಿ ತಿನ್ನುವುದರಿಂದ ತೂಕ ಇಳಿಸಬಹುದು. ಹೃದಯದ ಆರೋಗ್ಯಕ್ಕೆ ಇದರಿಂದ ಸಾಕಷ್ಟು ಪ್ರಯೋಜನವಿದೆ.

ಅನಾನಸ್: ಎಂಥವರನ್ನೂ ಆಕರ್ಷಿಸುವ ರುಚಿಕರ ಹಣ್ಣು ಅನಾನಸ್‌. ಇದನ್ನು ತಿನ್ನುವುದರಿಂದ ಹೃದಯಾಘಾತದ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಅನಾನಸ್‌ ಅನ್ನು ಮಿತವಾಗಿ ತಿನ್ನಬೇಕು. ಅತಿಯಾಗಿ ತಿಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಹಳದಿ ಕ್ಯಾಪ್ಸಿಕಂ: ಬೆಲ್‌ ಪೆಪ್ಪರ್‌ ಅಥವಾ ಕ್ಯಾಪ್ಸಿಕಂನಲ್ಲಿ ಫೈಬರ್, ಕಬ್ಬಿಣ ಮತ್ತು ಫೋಲೇಟ್ ಹೇರಳವಾಗಿ ಕಂಡುಬರುತ್ತವೆ. ಇದನ್ನು ಸೇವನೆ ಮಾಡುವುದರಿಂದ ದೇಹವು ಹೆಚ್ಚಿನ ಶಕ್ತಿಯನ್ನು ಪಡೆಯುತ್ತದೆ. ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ. ಪರಿಣಾಮ ಹೃದಯವೂ ಆರೋಗ್ಯವಾಗಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...