ಉತ್ತರ ಪ್ರದೇಶದ ಪ್ರತಿಯೊಂದು ಸ್ಥಳಯೂ ಬಹಳ ವಿಶೇಷವಾಗಿದೆ. ಯಾಕೆಂದರೆ ಇಲ್ಲಿ ಅನೇಕ ಐತಿಹಾಸಿಕ, ಧಾರ್ಮಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ನೋಡಬಹುದು. ಇಲ್ಲಿ ಯಾವಾಗಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಮನಸ್ಸಿಗೆ ಶಾಂತಿ ಬಯಸುವವರು ಒಮ್ಮೆ ಉತ್ತರ ಪ್ರದೇಶದ ಈ ಜಲಪಾತಗಳಿಗೆ ಆಗಮಿಸಿ.
ಮುಕ್ಕಾ ಜಲಪಾತ : ಉತ್ತರ ಪ್ರದೇಶದ ಪೂರ್ವಾಂಚಲದಲ್ಲಿರುವ ಈ ಜಲಪಾತವು ಸೋನಭದ್ರ ಜಿಲ್ಲೆಯಲ್ಲಿದೆ. ಇಲ್ಲಿ ಬೇಲನ್ ನದಿಯ ನೀರು 50ಅಡಿ ಎತ್ತರದಿಂದ ಬೀಳುತ್ತದೆ. ಹಾಗಾಗಿ ಇದರ ಶಬ್ದ ಕೇಳಲು ಬಹಳ ಖುಷಿಯಾಗುತ್ತದೆ. ಈ ತಾಣ ಸೆಲ್ಫಿ ಪ್ರಿಯರಿಗೆ ಬಹಳ ಸೂಕ್ತವಾಗಿದೆ.
ಲಖನಿಯಾ ಜಲಪಾತ : ಮಿರ್ಜಾಪುರದಲ್ಲಿರುವ ಲಖನಿಯಾ ಜಲಪಾತವನ್ನು ನಿಸರ್ಗ ಪ್ರೇಮಿಗಳು ಬಹಳ ಇಷ್ಟಪಡುತ್ತಾರೆ. ಎತ್ತರದ ಪರ್ವತಗಳಿಂದ 100 ಮೀಟರ್ ಎತ್ತರದಿಂದ ನೀರು ಬೀಳುವ ದೃಶ್ಯ ಬಹಳ ಮನಮೋಹಕವಾಗಿದೆ.
ಹಾಗೇ ಮಿರ್ಜಾಪುರದಲ್ಲಿ ಇನ್ನೊಂದು ಸಿದ್ಧನಾಥ ಕಿ ದಾರಿ ಜಲಪಾತವಿದೆ. ಇದು ತಾಂಡಫಾಲ್ ಕೇಂದ್ರದಿಂದ ಸುಮಾರು 15 ಕಿಮೀ ದೂರದಲ್ಲಿದೆ. ಇಲ್ಲಿ ಪರ್ವತದಿಂದ ನೀರು ನೆಲದ ಮೇಲೆ ಬೀಳುವ ದೃಶ್ಯ ಸುಂದರವಾಗಿದೆ.
ಚಂದೌಲಿ ಜಲಪಾತ : ಚಂದೌಲಿಯಲ್ಲಿ ರಾಜ್ ದಾರಿ ಮತ್ತು ದೇವದಾರಿ ಜಲಪಾತಗಳಿವೆ. ಇವು ಚಂದೌಲಿಯಿಂದ 55 ಕಿಮೀ ದೂರದಲ್ಲಿರುವ ನೌಘರ್ ನ ದಟ್ಟವಾದ ಅರಣ್ಯಗಳ ನಡುವೆ ಇದೆ. ಸರ್ಚ್ ಟವರ್ ನಿಂದ ಜಲಪಾತವನ್ನು ವೀಕ್ಷಣೆ ಮಾಡಬಹುದು. 65ಮೀಟರ್ ಎತ್ತರದಿಂದ ಕಲ್ಲಿನ ಪರ್ವತಗಳ ಮೂಲಕ ಬೀಳುವ ನೀರಿನ ನೋಟ ಸೆಲ್ಫಿ ಪ್ರಿಯರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಬಹಳ ಖುಷಿಯನ್ನು ನೀಡುತ್ತದೆ.
ಹಾಗಾಗಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದಾಗ ಈ ಸುಂದರವಾದ ಜಲಪಾತಗಳಿರುವ ಸ್ಥಳಕ್ಕೆ ಭೇಟಿ ನೀಡಿ ಮನಸ್ಸನ್ನು ಉಲ್ಲಾಸಗೊಳಿಸಿಕೊಳ್ಳಿ.