alex Certify ಮಳೆಗಾಲದಲ್ಲಿ ಹೊಟ್ಟೆಯ ಶತ್ರುವಿನಂತಾಗುತ್ತವೆ ಈ ತರಕಾರಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಗಾಲದಲ್ಲಿ ಹೊಟ್ಟೆಯ ಶತ್ರುವಿನಂತಾಗುತ್ತವೆ ಈ ತರಕಾರಿಗಳು…!

ಮುಂಗಾರು ಶುರುವಾಗಿದೆ. ಈ ಸೀಸನ್‌ನಲ್ಲಿ ರುಚಿಕರವಾದ ಆಹಾರ  ಸವಿಯಲು ಎಲ್ಲರೂ ಬಯಸುತ್ತಾರೆ. ಆದರೆ ಮಳೆಗಾಲದಲ್ಲಿ ಆಹಾರ ಕ್ರಮದ ಬಗ್ಗೆಯೂ ಕಾಳಜಿ ವಹಿಸಬೇಕು. ಕೆಲವು ತರಕಾರಿಗಳು ಮತ್ತು ರಸ್ತೆ ಬದಿಯ ಅಂಗಡಿಗಳಿಂದ ಕರಿದ ಆಹಾರವನ್ನು ಮಳೆಗಾಲದಲ್ಲಿ ತಿನ್ನಬಾರದು.

ಮಳೆಗಾಲದಲ್ಲಿ ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಗಳು ಹೊಟ್ಟೆ ಪ್ರವೇಶಿಸಿ ರೋಗಗಳನ್ನು ಉಂಟುಮಾಡುತ್ತವೆ. ಹಾಗಾಗಿ ಕೆಲವು ನಿರ್ದಿಷ್ಟ ತರಕಾರಿಗಳನ್ನು ಮಳೆಗಾಲದಲ್ಲಿ ಸೇವನೆ ಮಾಡದೇ ಇರುವುದು ಉತ್ತಮ.

ಸೊಪ್ಪು: ಮಳೆಗಾಲದಲ್ಲಿ ಪಾಲಕ್, ಎಲೆಕೋಸು ಮತ್ತು ಮೆಂತ್ಯಗಳಂತಹ ಸೊಪ್ಪಿನಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಹಾಗಾಗಿ ಅವುಗಳನ್ನು ಸೇವಿಸದೇ ಇರುವುದು ಉತ್ತಮ.

ಮೊಳಕೆಯೊಡೆದ ಧಾನ್ಯಗಳು : ಮಾನ್ಸೂನ್ ಸಮಯದಲ್ಲಿ ಮೊಳಕೆಯೊಡೆದ ಧಾನ್ಯಗಳು ಮತ್ತು ಕಾಳುಗಳನ್ನು ತಿನ್ನುವುದು ಸುರಕ್ಷಿತವಲ್ಲ. ಹೆಚ್ಚಿನ ತೇವಾಂಶದ ಕಾರಣ ಅವುಗಳಲ್ಲಿ ಶಿಲೀಂಧ್ರ ಬೆಳೆಯುವ ಅಪಾಯವಿರುತ್ತದೆ. ಇದರಿಂದ ಜೀರ್ಣಕ್ರಿಯೆಯ ಸಮಸ್ಯೆ ಮತ್ತು ಸೋಂಕು ಉಂಟಾಗುತ್ತದೆ.

ಅಣಬೆ : ಅಣಬೆಯಲ್ಲಿ ವಿಟಮಿನ್ ಡಿಯಂತ ಶಕ್ತಿಶಾಲಿ ಪೋಷಕಾಂಶಗಳಿರುತ್ತವೆ. ಇದು ಆರೋಗ್ಯಕರ ತರಕಾರಿ. ಆದರೆ ಇದನ್ನು ಮಳೆಗಾಲದಲ್ಲಿ ತಿನ್ನುವುದು ರೋಗಗಳನ್ನು ಆಹ್ವಾನಿಸಿದಂತೆ. ಅಣಬೆಯನ್ನು ಆರ್ದ್ರ ವಾತಾವರಣದಲ್ಲಿ ಬೆಳೆಯಲಾಗುತ್ತದೆ, ಇದರಿಂದಾಗಿ ಮಳೆಗಾಲದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಬೆಳೆಯುವ ಅಪಾಯವಿರುತ್ತದೆ. ಮಳೆಗಾಲದಲ್ಲಿ ಅಣಬೆ ತಿನ್ನುವುದರಿಂದ ಜೀರ್ಣಕ್ರಿಯೆಯ ತೊಂದರೆಗಳು ಉಂಟಾಗಬಹುದು.

ಅವರೆಕಾಳು ಮತ್ತು ಕಾರ್ನ್: ಇವು ತೇವಾಂಶವನ್ನು ಆಕರ್ಷಿಸುವ ಪಿಷ್ಟ ತರಕಾರಿಗಳಾಗಿವೆ. ಮಳೆಗಾಲದಲ್ಲಿ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುವ ಅಪಾಯವಿರುತ್ತದೆ. ಆದ್ದರಿಂದ ಇದನ್ನು ಬೇಯಿಸಿ ತಿನ್ನಬೇಕು, ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.

ಬದನೆಕಾಯಿ : ಮಳೆಗಾಲದಲ್ಲಿ ಬದನೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಬದನೆ ಗಿಡದಲ್ಲಿ ಫಂಗಲ್ ಸೋಂಕಿನ ಅಪಾಯವಿರುತ್ತದೆ. ತೇವಾಂಶದ ಕಾರಣದಿಂದಾಗಿ ಈ ತರಕಾರಿ ಬ್ಯಾಕ್ಟೀರಿಯಾದಿಂದ ತುಂಬಿರುತ್ತದೆ, ಅದು ಅನಾರೋಗ್ಯವನ್ನು ಉಂಟುಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...