ಸಂತೋಷವನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಸಂಶೋಧಕರು ಸಂತೋಷದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಎರಡು ವಿಷ್ಯಗಳಿಂದ ಮಾತ್ರ ನಿಜವಾದ ಸಂತೋಷ ಸಿಗಲು ಸಾಧ್ಯ ಎಂದು ಸಂಶೋಧಕರು ಹೇಳಿದ್ದಾರೆ.
ನಿದ್ರೆ ಹಾಗೂ ಸೆಕ್ಸ್ ಎರಡು ಮಾತ್ರ ನಿಜವಾದ ಸಂತೋಷ ನೀಡಲು ಸಾಧ್ಯ. ಉಳಿದವುಗಳಿಂದ ಸಿಗುವ ಸಂತೋಷ ಹೆಚ್ಚು ತೃಪ್ತಿ ನೀಡುವುದಿಲ್ಲವೆಂದು ಸಂಶೋಧಕರು ಹೇಳಿದ್ದಾರೆ. ಸಂಶೋಧಕರು, ತಿಂಗಳ ಸಂಬಳ ಪಡೆದಾಗ ಸಿಗುವ ಖುಷಿಗಿಂತ ಹೆಚ್ಚು ಹಾಗೂ ಶಾಶ್ವತ ಖುಷಿಯನ್ನು ನಿದ್ರೆ ಹಾಗೂ ಸೆಕ್ಸ್ ನೀಡುತ್ತದೆ ಎಂದಿದ್ದಾರೆ.
ಉದ್ಯೋಗ ಸುರಕ್ಷತೆ ಹಾಗೂ ಆರೋಗ್ಯ, ಸಂಬಳ ಹೆಚ್ಚಳವಾದಾಗ ಸಿಗುವ ಸಂತೋಷಕ್ಕಿಂತ ಇದು ಹೆಚ್ಚು ಸಂತೋಷ ನೀಡುತ್ತದೆ ಎಂದಿದ್ದಾರೆ. ಸಂಶೋಧನೆಯಲ್ಲಿ ಹೊಸ ಹಾಗೂ ಸಣ್ಣ ಕುಟುಂಬದಲ್ಲಿ ವಾಸವಾಗಿರುವ ಜನರು ಹೆಚ್ಚು ಖುಷಿಪಡುತ್ತಾರೆಂದು ಹೇಳಲಾಗಿದೆ. ಅದ್ರಲ್ಲೂ ಅವ್ರ ಖುಷಿಗೆ ಮುಖ್ಯ ಕಾರಣವಾಗಿದ್ದು ಚಿಕ್ಕ ಮಗು.
ಮಕ್ಕಳಿಲ್ಲದ 30-40 ವರ್ಷ ವಯಸ್ಸಿನ ಕುಟುಂಬದಲ್ಲಿ ಖುಷಿ ಕಡಿಮೆಯಂತೆ. ಹಾಗೆ ಕಿರಿಯರಿಗಿಂತ ಹಿರಿಯರು ಹೆಚ್ಚು ಸಂತೋಷವಾಗಿರುತ್ತಾರಂತೆ. ಮನೆಗಿಂತ ಹೊರಗೆ ಹೆಚ್ಚು ಸಮಯ ಕಳೆಯುವವರು ಕಡಿಮೆ ಸಂತೋಷ ಹೊಂದಿರುತ್ತಾರಂತೆ. ಬಾಡಿಗೆ ಮನೆ ಹಾಗೂ ಸ್ವಂತ ಮನೆಯಲ್ಲಿ ವಾಸಿಸುವರ ನಡುವೆ ಅಂತ ವ್ಯತ್ಯಾಸವೇನಿಲ್ಲ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.