ನಿಮ್ಮ ಡೇಟಾ ಕದಿಯುವ ಹಲವು ಅಪ್ಲಿಕೇಶನ್ ಗಳಿವೆ. ಇದಕ್ಕಾಗಿ ಮೊಬೈಲ್ ಬಳಕೆದಾರರು ಯಾವುದಾದರೂ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಈ ನಡುವೆ ಆತಂಕಕಾರಿ ವರದಿಯೊಂದರಲ್ಲಿ ಅತಿಹೆಚ್ಚಾಗಿ ಬಳಸುವ ಫೇಸ್ ಬುಕ್ ಮತ್ತು ಇನ್ಸ್ಟಾ ಅಪ್ಲಿಕೇಷನ್ ಗಳು ಗ್ರಾಹಕರ ಖಾಸಗಿತನ ಉಲ್ಲಂಘಿಸುವ ಆಕ್ರಮಣಕಾರಿ ಅಪ್ಲಿಕೇಶನ್ ಗಳಾಗಿವೆ ಎಂದು ತಿಳಿದುಬಂದಿದೆ.
ಸೈಬರ್ ಸೆಕ್ಯುರಿಟಿ ಸಂಸ್ಥೆ ಸರ್ಫ್ಶಾರ್ಕ್ನ ಇತ್ತೀಚಿನ ವರದಿಯಲ್ಲಿ ಈ ಅಂಶ ಬಯಲಾಗಿದೆ. ಸರ್ಫ್ಶಾರ್ಕ್ 100 ಜನಪ್ರಿಯ ಅಪ್ಲಿಕೇಶನ್ಗಳ ಡೇಟಾ ಅಭ್ಯಾಸಗಳನ್ನು ವಿಶ್ಲೇಷಿಸಿದೆ. ಇದರಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅತ್ಯಂತ “ಡೇಟಾ ಹಸಿವು” ( data-hungry) ಅಪ್ಲಿಕೇಷನ್ ಗಳೆಂದು ತಿಳಿಸಿದೆ.
ಪಾವತಿ ವಿವರಗಳು, ಬ್ರೌಸಿಂಗ್ ಹಿಸ್ಟರಿ ಮತ್ತು ನಿಖರವಾದ ಲೊಕೇಷನ್ ನಂತಹ ಸೂಕ್ಷ್ಮ ಮಾಹಿತಿ ಸೇರಿದಂತೆ ಅಪ್ಲಿಕೇಷನ್ ನ ಗೌಪ್ಯತೆ ನೀತಿಯಲ್ಲಿ ವಿವರಿಸಿರುವ 32 ಡೇಟಾ ಪಾಯಿಂಟ್ಗಳನ್ನು ಆಧರಿಸಿ ಸಂಶೋಧನೆಯು ಅಪ್ಲಿಕೇಶನ್ಗಳನ್ನು ಶ್ರೇಣೀಕರಿಸಿದೆ.
ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವಿಕೆಯನ್ನು ಡೇಟಾ-ಹಸಿವು ಅಥವಾ data-hungry ಎಂದು ಕರೆಯಲಾಗುತ್ತದೆ.
“ಮೆಟಾ ಸಂಸ್ಥೆ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಎರಡೂ ಪ್ಲಾಟ್ಫಾರ್ಮ್ಗಳ ಮಾಲೀಕತ್ವ ಹೊಂದಿರುವುದರಿಂದ ಅದು ಒಂದೇ ರೀತಿಯ ಡೇಟಾ ಸಂಗ್ರಹಣಾ ತಂತ್ರಗಳನ್ನು ಹಂಚಿಕೊಳ್ಳುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ. ಎಲ್ಲಾ 32 ಡೇಟಾ ಪಾಯಿಂಟ್ಗಳನ್ನು ಸಂಗ್ರಹಿಸುವಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಮುಂದಿದ್ದು, ಈ ಕಾರ್ಯ ಇನ್ಯಾವುದೇ ಅಪ್ಲಿಕೇಷನ್ ನಿಂದ ಸಾಧ್ಯವಿಲ್ಲದ ಕೆಲಸವಾಗಿದೆ. ಈ ಮೂಲಕ ಗ್ರಾಹಕರ ಡೇಟಾ ಸಂಗ್ರಹದಲ್ಲಿ ಫೇಸ್ ಬುಕ್ ಮತ್ತು ಇನ್ಟಾಖಾಗ್ರಾಂ ಎರಡು ಅಪ್ಲಿಕೇಷನ್ ಗಳು ಮುಂದಿವೆ ಎನ್ನಲಾಗಿದೆ.
ವರದಿಯ ಪ್ರಕಾರ ಎರಡೂ ಅಪ್ಲಿಕೇಶನ್ಗಳು ಪಟ್ಟಿ ಮಾಡಲಾದ 32 ಎಲ್ಲಾ ಡೇಟಾ ಪಾಯಿಂಟ್ಗಳನ್ನು ಸಂಗ್ರಹಿಸಿದಾಗ ಅವು ಹೆಸರು, ವಿಳಾಸ ಮತ್ತು ಫೋನ್ ಸಂಖ್ಯೆ ಸೇರಿದಂತೆ ಟ್ರ್ಯಾಕಿಂಗ್ ಉದ್ದೇಶಗಳಿಗಾಗಿ ಏಳನ್ನು ಮಾತ್ರ ಫೇಸ್ ಬುಕ್ , ಇನ್ ಸ್ಟಾಗ್ರಾಂ ಬಳಸಿದೆ. ಉಳಿದ ಡೇಟಾವನ್ನು ಬಳಕೆದಾರರ ಗುರುತಿಗೆ ಲಿಂಕ್ ಮಾಡಲಾಗಿದ್ದರೂ, ಟ್ರ್ಯಾಕಿಂಗ್ಗಾಗಿ ಬಳಸಲಾಗಿಲ್ಲ.
ಕುತೂಹಲಕಾರಿಯಾಗಿ ಟ್ವಿಟರ್ ಕಡಿಮೆ ಪ್ರಮಾಣದಲ್ಲಿ ಬಳಕೆದಾರರ ಡೇಟಾವನ್ನು ಸಂಗ್ರಹಿಸಿದ್ದರೂ ಅದನ್ನು ಬೇರೆ ಕಂಪನಿಗಳೊಂದಿಗೆ ಹಂಚಿಕೊಂಡಿದೆ. ಟ್ವಿಟರ್ ತಾನು ಸಂಗ್ರಹಿಸಿದ ಮತ್ತು ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವ 22 ಡೇಟಾ ತುಣುಕುಗಳ ಪೈಕಿ ಅರ್ಧದಷ್ಟು ಟ್ರ್ಯಾಕಿಂಗ್ಗಾಗಿ ಬಳಸಿದೆ.
ವರದಿ ವಿಶ್ಲೇಷಿಸಿದ 10 ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳಲ್ಲಿ, ವಿವಿಧ ವಿಭಾಗಗಳಲ್ಲಿ ಸರಾಸರಿ ಅಪ್ಲಿಕೇಶನ್ಗಿಂತ ಹೆಚ್ಚಿನ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಸಂಶೋಧನೆಯು ಬಹಿರಂಗಪಡಿಸಿದೆ.