alex Certify ‘ಕುತುಬ್ ಮಿನಾರ್‌’ ಗಿಂತಲೂ ಎತ್ತರವಾಗಿವೆ ಈ ಮರಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕುತುಬ್ ಮಿನಾರ್‌’ ಗಿಂತಲೂ ಎತ್ತರವಾಗಿವೆ ಈ ಮರಗಳು…!

Qutub Minar: The world's tallest brick minaret — Google Arts & Culture

ಪ್ರಪಂಚದ ವಿವಿಧ ಭಾಗಗಳಲ್ಲಿ ಸಾವಿರಾರು ರೀತಿಯ ಮರಗಳು ಮತ್ತು ಸಸ್ಯಗಳು ಕಂಡುಬರುತ್ತವೆ. ಕುತುಬ್ ಮಿನಾರ್‌ ಮತ್ತು ಐಫೆಲ್ ಟವರ್‌ಗಿಂತಲೂ ಹೆಚ್ಚು ಎತ್ತರವಿರುವ ಮರಗಳೂ ಇವೆ. ಇವುಗಳಲ್ಲಿ ಹೈಪರಿಯನ್ ಮತ್ತು ಮೆನರಾ ಬಹಳ ವಿಶೇಷವಾಗಿವೆ.

ಸೆಂಚುರಿಯನ್‌ ಟ್ರೀ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದನ್ನು ಯೂಕಲಿಪ್ಟಸ್ ವರ್ಗದಲ್ಲಿ ಇರಿಸಲಾಗಿದೆ. ಇದರ ಎತ್ತರ 99 ಮೀಟರ್ ಎಂದು ಅಳೆಯಲಾಗಿದೆ.

ಡರ್ನರ್ ಎಂಬ ಹೆಸರಿನ ಮರವು ಅಮೆರಿಕದ ಒರೆಗಾನ್‌ನಲ್ಲಿ ಕಂಡುಬರುತ್ತದೆ. ಈ ಮರದ ಎತ್ತರ 99.6 ಮೀಟರ್. ಇದು ರೆಡ್‌ವುಡ್ ವರ್ಗದಲ್ಲಿಲ್ಲ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಂಡುಬರುವ ಹೈಪರಿಯನ್ ಅನ್ನು ವಿಶ್ವದ ಅತಿ ಎತ್ತರದ ಮರವೆಂದು ಪರಿಗಣಿಸಲಾಗಿದೆ. ಇದರ ಎತ್ತರ ಸುಮಾರು 115 ಮೀಟರ್.

ಇನ್ನು ಯಲ್ಲೋ ಮೆರಾಂಟಿ ಎಂಬ ಮರವು ಮಲೇಷ್ಯಾದಲ್ಲಿ ಕಂಡುಬರುತ್ತದೆ. ಇದರ ಎತ್ತರ 100 ಮೀಟರ್.

ಸಿಟಕಾ ಸ್ಪ್ರಾಸ್‌ ಟ್ರೀ ಎಂಬ ಈ ಮರವು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿಯೂ ಕಂಡುಬರುತ್ತದೆ, ಇದರ ಎತ್ತರ 100 ಮೀಟರ್. ಈ ಮರವು ಔಷಧೀಯ ಗುಣಗಳಿಂದ ಕೂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...