ಪತಿ-ಪತ್ನಿ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣ ವಿಷ್ಯ ದೊಡ್ಡ ಜಗಳಕ್ಕೆ ತಿರುಗಿದಾಗ ಸಂಬಂಧ ಹಾಳಾಗುತ್ತದೆ. ಇದಕ್ಕೆ ವಾಸ್ತು ದೋಷ, ಜಾತಕ, ಗ್ರಹಗತಿ ಎಲ್ಲವೂ ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಸಂಬಂಧ ಸದಾ ಗಟ್ಟಿಯಾಗಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಪಾಲನೆ ಮಾಡಬೇಕು.
ಮನೆಯ ವಾಸ್ತು ದೋಷದಿಂದ ಉಂಟಾಗುವ ನಕಾರಾತ್ಮಕ ಶಕ್ತಿಯು ಜಗಳಕ್ಕೆ ಕಾರಣವಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಸ್ವಚ್ಛಗೊಳಿಸಬೇಕು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಇಡೀ ಮನೆಗೆ ಕರ್ಪೂರದ ದೀಪವನ್ನು ತೋರಿಸಿ. ಇದು ವಾಸ್ತು ದೋಷವನ್ನು ನಿವಾರಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಕಾರಣವಾಗುತ್ತದೆ.
ಶುಕ್ರವಾರ, ವಿಷ್ಣು ಮತ್ತು ಲಕ್ಷ್ಮಿಯನ್ನು ಪೂಜೆ ಮಾಡಬೇಕು. ಸಿಹಿ ತಿಂಡಿಯನ್ನು ಅರ್ಪಿಸಬೇಕು. ನಂತ್ರ ಪತ್ನಿ, ಪತಿ ಈ ಪ್ರಸಾದವನ್ನು ತಿನ್ನಬೇಕು.
ಹಳದಿ ದಾರಕ್ಕೆ 7 ಅರಿಶಿನ ಕೊಂಬನ್ನು ಕಟ್ಟಬೇಕು. ನಂತ್ರ ಅದನ್ನು ಬಲಗೈನಲ್ಲಿ ಹಿಡಿದು ಓಂ ನಮೋ ಭಾಗವತೇ ವಾಸುದೇವಾಯ ನಮಃ ಮಂತ್ರ ಜಪಿಸಬೇಕು. ಈ ಮಂತ್ರವನ್ನು 7 ಬಾರಿ ಜಪಿಸಬೇಕು. ನಂತ್ರ ಕೆಂಪು ಬಟ್ಟೆಯಲ್ಲಿ ಕಟ್ಟಿ ಮಲಗುವ ಕೋಣೆಯಲ್ಲಿ ಇಡಬೇಕು. ಇದು ವೈವಾಹಿಕ ಜೀವನವನ್ನು ಗಟ್ಟಿಗೊಳಿಸುತ್ತದೆ.