alex Certify ಅಧಿಕ ರಕ್ತದೊತ್ತಡದಿಂದ ದೂರವಿಡುತ್ತವೆ ಈ ಉಪಾಯಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕ ರಕ್ತದೊತ್ತಡದಿಂದ ದೂರವಿಡುತ್ತವೆ ಈ ಉಪಾಯಗಳು

ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ನಮ್ಮ ಸಾಮಾನ್ಯ ರಕ್ತದೊತ್ತಡ 120/80 mm Hg ಗಿಂತ ಕಡಿಮೆಯಿರಬೇಕು. ಈ ಸಂಖ್ಯೆಯಲ್ಲಿ ಸ್ವಲ್ಪ ಬದಲಾವಣೆಯಾದರೂ ರಕ್ತದೊತ್ತಡ ಹೆಚ್ಚಾಗಿದೆ ಎಂದು ಹೇಳಬಹುದು ಮತ್ತು ಅದನ್ನು ನಿಯಂತ್ರಣಕ್ಕೆ ತರುವ ಅಗತ್ಯವಿರುತ್ತದೆ.

ಅಪಧಮನಿಗಳು ಸಂಕುಚಿತಗೊಂಡಾಗ ಮತ್ತು ದೇಹದ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾದಾಗ ಅಧಿಕ ರಕ್ತದೊತ್ತಡ ಸಂಭವಿಸುತ್ತದೆ. ಈ ಹರಿವಿನ ಹೆಚ್ಚಳವು ಅಪಧಮನಿಗಳಲ್ಲಿನ ಸೂಕ್ಷ್ಮ ಅಂಗಾಂಶದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟು ಮಾಡುತ್ತದೆ ಮತ್ತು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಹೃದಯಕ್ಕೆ ಹೆಚ್ಚು ಹಾನಿಯಾಗುತ್ತದೆ. 

ಅಧಿಕ ರಕ್ತದೊತ್ತಡದ ಲಕ್ಷಣಗಳು

ಅಸ್ಪಷ್ಟ ಅಥವಾ ಎರಡು ದೃಷ್ಟಿ

ತಲೆತಿರುಗುವಿಕೆ / ಮೂರ್ಛೆ

ಸುಸ್ತು

ದೀರ್ಘಕಾಲದ ತಲೆನೋವು

ವೇಗದ ಹೃದಯ ಬಡಿತ

ಮೂಗಿನಲ್ಲಿ ರಕ್ತಸ್ರಾವ

ಉಸಿರಾಟದ ತೊಂದರೆ

ವಾಕರಿಕೆ ಅಥವಾ ವಾಂತಿ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮನೆಮದ್ದುಗಳು

1. ಡ್ಯಾಶ್ ಡಯಟ್

ರಕ್ತದೊತ್ತಡದ ಲಕ್ಷಣಗಳನ್ನು ನಿರ್ವಹಿಸುವಲ್ಲಿ ನಿಮ್ಮ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ತಜ್ಞರ ಪ್ರಕಾರ ಡ್ಯಾಶ್‌ ಡಯಟ್‌ ಸಂಕೋಚನದ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಕಾಲೋಚಿತ ಹಣ್ಣುಗಳು, ಧಾನ್ಯಗಳು, ಡ್ರೈಫ್ರೂಟ್ಸ್‌ , ಮೀನು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬೇಕು.

2. ಕಡಿಮೆ ಉಪ್ಪು ಸೇವನೆ

ಅಧಿಕ ಬಿಪಿ ಇರುವ ರೋಗಿಗಳು ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇರಿಸಬಾರದು. ಕಡಿಮೆ ಉಪ್ಪು ಸೇವನೆ ಮಾಡಬೇಕು. ಸೋಡಿಯಂ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಉಪ್ಪನ್ನು ಕಡಿಮೆ ಮಾಡಿ ಆಹಾರದಲ್ಲಿ ಸೊಪ್ಪು ಮತ್ತು ಮಸಾಲೆಗಳನ್ನು ಬಳಸಿ.

3. ತೂಕವನ್ನು ನಿಯಂತ್ರಿಸಿ

ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಮತ್ತೊಂದು ಅಪಾಯಕಾರಿ ಅಂಶವೆಂದರೆ ಬೊಜ್ಜು. ತಜ್ಞರ ಪ್ರಕಾರ, ದೇಹದಲ್ಲಿನ ಹೆಚ್ಚುವರಿ ಕೊಬ್ಬು ಸಂಗ್ರಹವಾದರೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಾವಧಿಯಲ್ಲಿ ಇದು ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

4. ಧೂಮಪಾನವನ್ನು ತ್ಯಜಿಸಿ

ರಕ್ತದೊತ್ತಡವನ್ನು ನಿಯಂತ್ರಿಸಲು ಬಯಸಿದರೆ ಧೂಮಪಾನವನ್ನು ತ್ಯಜಿಸಬೇಕು. ಅಧ್ಯಯನಗಳ ಪ್ರಕಾರ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಧೂಮಪಾನವನ್ನೂ ಮಾಡುವ ಅಭ್ಯಾಸ ಹೊಂದಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...