alex Certify ಅಡುಗೆ ಮಾಡುವಾಗ ಉಪಯೋಗಕ್ಕೆ ಬರುತ್ತವೆ ಈ ಕೆಲ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮಾಡುವಾಗ ಉಪಯೋಗಕ್ಕೆ ಬರುತ್ತವೆ ಈ ಕೆಲ ಟಿಪ್ಸ್

ಅಡುಗೆ ಸ್ವಲ್ಪ ಏರುಪೇರಾದರೂ ತಿನ್ನುವರವರು ಮೂಗು ಮುರಿಯುತ್ತಾರೆ. ಆದ್ದರಿಂದ ಅಡುಗೆ ತಯಾರಿಸುವಾಗ ತರಕಾರಿಗಳನ್ನು ಯಾವ ರೀತಿ ಬೇಯಿಸಬೇಕು ಎಂಬುದನ್ನು ತಿಳಿದು ಕೊಳ್ಳಬೇಕು. ಅಡುಗೆ ಕೆಡದಂತೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಅಂತ ನೋಡೋಣ.

* ಹಾಗಲಕಾಯಿ, ತೊಂಡೆಕಾಯಿ, ಹೀರೆಕಾಯಿ ಮುಂತಾದ ಹಸಿರು ತರಕಾರಿಗಳನ್ನು ಬಣ್ಣ ಮಾಸದಂತೆ, ತೀರಾ ಮೆತ್ತಗಾಗದಂತೆ ಬೇಯಿಸಬೇಕು ಎಂದಾಗ ಸ್ವಲ್ಪ ಸಕ್ಕರೆ ಹಾಕಿ ಬೇಯಿಸಿದರೆ ತರಕಾರಿ ಬಣ್ಣ ಮಾಸುವುದಿಲ್ಲ.

* ಬಟಾಣಿ, ಅವರೆ, ತೊಗರಿ ಮುಂತಾದ ಕಾಳುಗಳನ್ನು ಬೇಯಿಸುವಾಗ ಚಿಟಕಿ ಅರಿಶಿನ ಹಾಗೂ 2 ಹನಿ ಬಾದಾಮಿ ಎಣ್ಣೆಯನ್ನು ಹಾಕಿ ಬೇಯಿಸಿ. ಅದರಿಂದ ಕಾಳುಗಳು ತಾಜಾ ರೀತಿಯಾಗಿಯೇ, ತೀರಾ ಮೆತ್ತಗೆ ಆಗದೆ ಉಂಡೆಯಾಗಿ ಉಳಿದುಕೊಳ್ಳುತ್ತವೆ.

* ತರಕಾರಿಗಳನ್ನು ಬೇಯಿಸುವ ಮೊದಲು ಸ್ವಲ್ಪ ಎಣ್ಣೆಯಲ್ಲಿ ಕರಿದು ನಂತರ ನೀರಿನಲ್ಲಿ ಹಾಕಿ ಬೇಯಿಸಿದರೆ ಪಾತ್ರೆ ತಳ ಹಿಡಿಯುವುದಿಲ್ಲ. ಅದಲ್ಲದೇ ಕಡಿಮೆ ಸಮಯದಲ್ಲಿಯೇ ಬೇಯುತ್ತದೆ.

* ಎಣ್ಣೆಯಲ್ಲಿ ಕರಿಯುವ ಕೆಲ ಪದಾರ್ಥಗಳು ಬಾಣಲೆಗೆ ಹಿಡಿದುಕೊಂಡಿರುತ್ತದೆ. ಅದನ್ನು ಉಜ್ಜುವುದು ಕಷ್ಟವಾಗುತ್ತದೆ. ತಳ ಹಿಡಿದ ಬಾಣಲೆಗೆ ತಣ್ಣನೆಯ ನೀರು ಹಾಕಿ 5 ನಿಮಿಷ ನೆನಸಿಡಬೇಕು. ನಂತರ ತೊಳೆದರೆ ಸುಲಭವಾಗಿ ಶುಚಿಯಾಗುತ್ತದೆ.

* ಹಾಲನ್ನು ಕಾಯಿಸುವಾಗ ಪಾತ್ರೆಯ ತುದಿಗೆ ಎಣ್ಣೆಯನ್ನು ಸವರಿ ಇಟ್ಟರೆ ಉಕ್ಕಿ ಕೆಳಗೆ ಚೆಲ್ಲುವುದಿಲ್ಲ.

* ಅಡುಗೆ ಮನೆಯಲ್ಲಿ ಎಣ್ಣೆ ಅಥವಾ ತುಪ್ಪ ಚೆಲ್ಲಿದ್ದರೆ ಚಿಂತೆ ಮಾಡಬೇಡಿ. ಬಿದ್ದ ಜಾಗಕ್ಕೆ ಬ್ಲೀಚಿಂಗ್‌ ಪೌಂಡರ್‌ ಹಾಕಿ. ಬ್ರಶ್‌ನಲ್ಲಿ ಹರಡಿ. ನಂತರ ಕ್ಲೀನ್‌ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...