ಆರೋಗ್ಯ ಕಾಪಾಡಲು ತಿನ್ನುವ ಆಹಾರ ಎಷ್ಟು ಮುಖ್ಯನೋ ಕುಡಿಯುವ ಪಾನೀಯ ಕೂಡ ಅಷ್ಟೇ ಮುಖ್ಯ. ಇದು ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಪಾನೀಯಗಳನ್ನು ಮಾತ್ರ ಸೇವಿಸಬೇಡಿ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ.
*ಸೋಡಾ ಮತ್ತು ಕೋಲ್ಡ್ ಡ್ರಿಂಕ್ಸ್ : ಇದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ಸೇವಿಸಿದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ, ತೂಕ ಹೆಚ್ಚಾಗುತ್ತದೆ, ಹೊಟ್ಟೆಯಲ್ಲಿ ಆಮ್ಲಿಯತೆ ಸಮಸ್ಯೆ ಕಾಡುವುದು, ಹೃದಯ ರೋಗ ಹೆಚ್ಚಾಗುತ್ತದೆ.
*ಎನರ್ಜಿ ಡ್ರಿಂಕ್ಸ್ : ದೇಹದ ಶಕ್ತಿ ಹೆಚ್ಚಾಗಲು ಕುಡಿಯುತ್ತೇವೆ. ಆದರೆ ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಖಿನ್ನತೆಗೆ ಬಲಿಯಾಗಬಹುದು, ಆತಂಕ ಹೆಚ್ಚಾಗುತ್ತದೆ, ಬೊಜ್ಜು ಹೆಚ್ಚಾಗುತ್ತದೆ, ನಾಡಿ ಬಡಿತ ಹೆಚ್ಚಾಗುತ್ತದೆ.
*ಕಾಫಿ-ಟೀ : ಹೆಚ್ಚಿನ ಜನರು ಇದನ್ನು ಪ್ರತಿದಿನ ಕುಡಿಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ದೇಹದ ಕೊಬ್ಬು ಹೆಚ್ಚಾಗುತ್ತದೆ ಖಿನ್ನತೆಗೆ ಕಾರಣವಾಗಬಹುದು.