alex Certify ಮೊಬೈಲ್‌ ಬಳಕೆದಾರರೇ ಎಚ್ಚರ: ಮತ್ತೆ ವಕ್ಕರಿಸಿದೆ ʼಜೋಕರ್ʼ ಮಾಲ್ವೇರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ಬಳಕೆದಾರರೇ ಎಚ್ಚರ: ಮತ್ತೆ ವಕ್ಕರಿಸಿದೆ ʼಜೋಕರ್ʼ ಮಾಲ್ವೇರ್

ಮೊಬೈಲ್ ಗಳಿಗೆ ಹಾನಿಯನ್ನುಂಟು ಮಾಡುವ ʼಜೋಕರ್ʼ ಎಂಬ ಮಾಲ್ವೇರ್ ಗಳನ್ನು ತೆಗೆದುಹಾಕುವಂತೆ ಮೊಬೈಲ್ ಬಳಕೆದಾರರಿಗೆ ಗೂಗಲ್ ಸೂಚನೆ ನೀಡಿದೆ. ಇತ್ತೀಚೆಗೆ ಗೂಗಲ್ ತನ್ನ ಪ್ಲೇಸ್ಟೋರ್ ನಲ್ಲಿ ಮೂರು ಮಾಲ್ವೇರ್ ಅಪ್ಲಿಕೇಶನ್ ಗಳನ್ನು ಪತ್ತೆ ಮಾಡಿದ್ದು, ಅವುಗಳು ಮೊಬೈಲ್ ಸಾಧನಗಳಿಗೆ ಹಾನಿ ಉಂಟು ಮಾಡುವುದಲ್ಲದೇ ಬಳಕೆದಾರರ ಖಾತೆಯಿಂದ ಹಣವನ್ನು ಲಪಟಾಯಿಸಲಿವೆ ಎಂದು ತಿಳಿಸಿದೆ.

ಜೋಕರ್ ಮಾಲ್ವೇರ್ ನೊಂದಿಗೆ ಇರುವ ಆ್ಯಪ್ ಗಳು ಆಂಡ್ರಾಯ್ಡ್ ಬಳಕೆದಾರರ ಹಣವನ್ನು ಲಪಟಾಯಿಸುತ್ತವೆ ಎಂದು ತಿಳಿಸಿರುವ ಗೂಗಲ್, ಈ ಅಪ್ಲಿಕೇಶನ್ ಗಳನ್ನು ಸೈಬರ್ ಸೆಕ್ಯುರಿಟಿ ಕಂಪನಿಯಾದ ಕಾಸ್ಪೆರ್ ಸ್ಕಿ ಪತ್ತೆ ಮಾಡಿದೆ ಎಂದು ಹೇಳಿದೆ.

ಮಾಸಿಕ ದೂರವಾಣಿ ಭತ್ಯೆ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ಸೇರಿ ವೇತನ ಹೆಚ್ಚಳದೊಂದಿಗೆ ಶಾಸಕರಿಗೆ ಬಂಪರ್ ಭತ್ಯೆ

ಗೂಗಲ್ ಪ್ಲೇಸ್ಟೋರ್ ನಲ್ಲಿ Style Message, Blood Pressure App ಮತ್ತು Camera PDF Scanner ಎಂಬ ಹೆಸರಿನ ಈ ಜೋಕರ್ ಮಾಲ್ವೇರ್ ಗಳು ಗುಪ್ತವಾಗಿ ಸೇರಿಕೊಂಡು ಬಳಕೆದಾರರ ಡಿವೈಸ್ ಗಳಲ್ಲಿ ಡೌನ್ಲೋಡ್ ಆಗುತ್ತಿವೆ. ಇವುಗಳು ಬಳಕೆದಾರರಿಗೆ ಮಾರಕ ಎಂಬುದನ್ನು ಅರಿತ ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ತೆಗೆದುಹಾಕಿದೆಯಾದರೂ, ಇನ್ನೂ ಅಸ್ತಿತ್ವದಲ್ಲಿವೆ. ಬಳಕೆದಾರರ ಸಹಮತಿ ಇಲ್ಲದೇ ಈ ಅಪ್ಲಿಕೇಶನ್ ಗೆ ಸೈನ್ ಇನ್ ಆಗಿ ಅವರಿಗೆ ಅರಿವಿಲ್ಲದೇ ಅವರಿಂದ ಹಣ ಕೀಳುವಂತಹ ಅಪ್ಲಿಕೇಶನ್ ಗಳಾಗಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಇಂತಹ ಅಪ್ಲಿಕೇಶನ್ ಗಳನ್ನು ಡಿವೈಸ್ ಗಳಿಂದ ಡಿಲೀಟ್ ಮಾಡಿ ಎಂದು ಗೂಗಲ್ ಬಳಕೆದಾರರಿಗೆ ಮನವಿ ಮಾಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...