alex Certify ನಿಮ್ಮ ಯೌವ್ವನವನ್ನು ಸದಾ ಕಾಪಾಡುತ್ತವೆ ಈ ಸಂಗತಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಯೌವ್ವನವನ್ನು ಸದಾ ಕಾಪಾಡುತ್ತವೆ ಈ ಸಂಗತಿಗಳು

ವಯಸ್ಸಾದಂತೆ ನಮಗೆಲ್ಲರಿಗೂ ಯೌವ್ವನ ಹಾಗೂ ಆರೋಗ್ಯದಿಂದ ಇರಬೇಕೆಂಬ ಬಯಕೆ ಇದ್ದೇ ಇರುತ್ತದೆ.

ನಿಮ್ಮ ಮುಪ್ಪಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸಬೇಕಾದರೆ, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಈ ಐದು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕು.

ನಿಮ್ಮ ದೇಹವನ್ನು ವರ್ಷಗಳ ಕಾಲ ದೃಢವಾಗಿಡಲು, ಸ್ನಾಯುವನ್ನು ಚೆನ್ನಾಗಿ ನಿರ್ವಹಿಸಲು ಭಾರ ಎತ್ತುವ ನಿತ್ಯ ವ್ಯಾಯಾಮವು ನೆರವಾಗುತ್ತದೆ. ಆರಂಭದಲ್ಲಿ ತುಂಬಾ ಭಾರ ಎತ್ತಬೇಡಿ. ನಿಧಾನವಾಗಿ ಭಾರ ಹೆಚ್ಚಿಸುತ್ತಾ ಹೋಗಿ. ಇದಕ್ಕಾಗಿ ತರಬೇತಿ ಪಡೆಯುವುದು ಸೂಕ್ತ. ಎರಡನೆಯದಾಗಿ ನಿಮ್ಮ ಆಹಾರದಲ್ಲಿ ಪ್ರೊಟೀನ್ ಸೇರ್ಪಡೆ ಹೆಚ್ಚಿಸಬೇಕು. ವಯಸ್ಸು 50 ದಾಟಿದ ಮೇಲೆ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಬೇಕಾಗುತ್ತದೆ.

ದಿನದ ಎಲ್ಲಾ ಮೂರು ಹೊತ್ತು ಆರೋಗ್ಯಕರ, ಪ್ರೊಟೀನ್‌ಯುಕ್ತ ಆಹಾರಗಳನ್ನು ಸೇವಿಸಬೇಕು. ಪ್ರೊಟೀನ್‌ಯಕ್ತ ಆಹಾರವನ್ನು ಮೂರು ಹೊತ್ತು ಸೇವಿಸಲು ಪ್ರಯತ್ನಿಸಿ. ಸೂರ್ಯನಿಂದ ನೇರವಾಗಿ ಪಡೆಯಬಹುದಾದ ವಿಟಮಿನ್ ಡಿ ನಿಮ್ಮ ದೇಹಕ್ಕೆ ಭಾರೀ ಅನುಕೂಲ ಒದಗಿಸಲಿದೆ. ಮುಂಜಾನೆ, ಸಂಜೆಯ ಸೂರ್ಯನ ಬೆಳಕಿಗೆ ಮೈಯೊಡ್ಡುವುದು ಹಾಗೂ ವಿಟಮಿನ್ ಡಿ ಮಾತ್ರೆ ಸೇವಿಸುವುದು ಉತ್ತಮ. ಇದು ಮೂಳೆಯನ್ನು ಗಟ್ಟಿಗೊಳಿಸಲಿದೆ.

ಕೊನೆಯದಾಗಿ ಆಂಟಿ ಆಕ್ಸಿಡೆಂಟ್‌ಭರಿತ ಗ್ರೀನ್ ಟೀ ಕುಡಿಯುವುದರಿಂದ ಯೌವ್ವನ ಕಾಪಾಡಲು ಅನುಕೂಲವಾಗುತ್ತದೆ. ಇದು ಚಯಾಪಚಯವನ್ನು ಉತ್ತೇಜಿಸುತ್ತದೆ, ಶಾರೀರಿಕ ಚಟುವಟಿಕೆಯನ್ನು ಸುಧಾರಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...