ಲಿವರ್ ನಮ್ಮ ದೇಹದ ಬಹುಮುಖ್ಯ ಅಂಗಗಳಲ್ಲೊಂದು. ರಕ್ತವನ್ನು ಶುದ್ಧೀಕರಿಸುವ ಜೊತೆಗೆ 500 ರಾಸಾಯನಿಕ ಕ್ರಿಯೆಗಳನ್ನು ನಡೆಸುತ್ತದೆ. ಹಾಗಾಗಿ ನಮ್ಮ ಲಿವರ್ ಆರೋಗ್ಯವಾಗಿರುವುದು ಬಹಳ ಮುಖ್ಯ. ಲಿವರ್ ಶುದ್ಧವಾಗಿದ್ದರೆ ನಾವು ಆರೋಗ್ಯವಾಗಿದ್ದಂತೆ. ಲಿವರ್ ಶುದ್ಧೀಕರಣಕ್ಕೆ ನಾವು ಕೆಲವೊಂದು ಆಹಾರಗಳ ಸೇವನೆ ಮಾಡುವುದು ಬಹಳ ಮುಖ್ಯ.
ಪ್ರತಿದಿನ ಸೇಬು ಹಣ್ಣು, ಕ್ಯಾರೆಟ್, ಬಿಟ್ರೋಟ್, ಬೆಳ್ಳುಳ್ಳಿ ಮತ್ತು ಹಸಿರು ತರಕಾರಿಗಳನ್ನು ಸೇವನೆ ಮಾಡಬೇಕು. ಇವುಗಳ ಸೇವನೆಯಿಂದ ಲಿವರ್ ಶುದ್ಧವಾಗಿ ಇದಕ್ಕೆ ಸಂಬಂಧಿಸಿದ ರೋಗಗಳು ದೂರವಾಗುತ್ತವೆ.
ಹಣ್ಣಿನ ಜೊತೆ ಹೂಕೋಸು, ಎಲೆಕೋಸು ಸೇವನೆ ಬಹಳ ಒಳ್ಳೆಯದು. ಇದರಲ್ಲಿ ಸಲ್ಫರ್ ಪ್ರಮಾಣ ಜಾಸ್ತಿ ಇರುತ್ತದೆ. ಇದು ಟಾಕ್ಸಿನ್ ಹೊರಹಾಕಿ ಲಿವರ್ ಶುದ್ಧವಾಗಿರುವಂತೆ ನೋಡಿಕೊಳ್ಳುತ್ತದೆ.
ಅರಿಶಿನ, ಲಿವರ್ ಶುದ್ಧೀಕರಣಕ್ಕೆ ಬಹಳ ಉಪಯೋಗಕಾರಿ. ಅರಿಶಿನದಲ್ಲಿರುವ ಗುಣಗಳು ಲಿವರ್ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
ಲಿವರ್ ಶುದ್ಧವಾಗಿರಲು ಬಯಸುವವರು ಜೋಳ ಹಾಗೂ ರಾಗಿ ಸೇವನೆ ಮಾಡಬೇಕು. ಇದರಲ್ಲಿರುವ ನಾರಿನ ಅಂಶ ಟಾಕ್ಸಿನ್ ಹೊರ ಹಾಕಲು ನೆರವಾಗುತ್ತದೆ.
ಪ್ರತಿದಿನ ನಿಂಬೆ ರಸ ಅಥವಾ ಗ್ರೀನ್ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಲಿವರ್ ಸ್ವಚ್ಛಗೊಳ್ಳುವ ಜೊತೆಗೆ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ.
ಅಡುಗೆ ಮಾಡುವಾಗ ಆಲಿವ್ ಆಯಿಲ್ ಬಳಸಿ. ಇದು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಬರದಂತೆ ತಡೆಯುತ್ತದೆ.