ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ಮುಜುಗರಪಟ್ಟುಕೊಳ್ತಾರೆ. ಕೆಲವರು ಸಮಸ್ಯೆಯಿದ್ದರೂ ವೈದ್ಯರ ಬಳಿ ಹೋಗುವುದಿಲ್ಲ. ಬಹುತೇಕ ಎಲ್ಲ ಸಮಸ್ಯೆಗೆ ವೈದ್ಯರ ಬಳಿ ಪರಿಹಾರವಿರುತ್ತದೆ. ಹಾಗೆ ಮಾರುಕಟ್ಟೆಯಲ್ಲಿ ಸಿಗುವು ಕೆಲ ಉತ್ಪನ್ನಗಳು ಲೈಂಗಿಕ ಬದುಕನ್ನು ಸುಮಧುರಗೊಳಿಸುತ್ತದೆ.
ಫರ್ಟಿಲಿಟಿ ಟೆಸ್ಟ್ : ಮಹಿಳೆಯರು ಗರ್ಭಧಾರಣೆ ಬಗ್ಗೆ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮೂಲಕ ತಿಳಿದುಕೊಳ್ಳುತ್ತಾರೆ. ಈಗ ಪುರುಷರು ಕೂಡ ಮನೆಯಲ್ಲಿಯೇ ಫರ್ಟಿಲಿಟಿ ಟೆಸ್ಟ್ ಮಾಡಿಸಬಹುದು. ಇಂತಹ ಮಷಿನ್ ಗಳು ವೀರ್ಯದಲ್ಲಿನ ಪ್ರೋಟೀನ್ ಪ್ರಮಾಣವನ್ನು ಕಂಡು ಹಿಡಿಯುತ್ತವೆ. ಫರ್ಟಿಲಿಟಿ ಟೆಸ್ಟ್ ಮಾಡಿಸಲು ನಾಚಿಕೊಳ್ಳುವ ಪುರುಷರು ಈ ಕಿಟ್ ಬಳಸಬಹುದು.
ಪುರುಷರ ಲೈಂಗಿಕ ಆಸಕ್ತಿ ಹೆಚ್ಚಿಸುವ ಕ್ಯಾಪ್ಸೂಲ್ : ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಮೇಲ್ ಬೂಸ್ಟ್ ಎಂಬ ಕ್ಯಾಪ್ಸೂಲ್ ಬಂದಿದೆ. ಇದನ್ನು ಜಿನಸೆಂಗ್ ಮತ್ತು ಮೈಕಾದಿಂದ ತಯಾರಿಸಲಾಗಿದ್ದು, ಇದರಲ್ಲಿ ವಿಟಮಿನ್ ಇ ಮತ್ತು ಜಿಂಕ್ ಅಂಶಗಳಿವೆ. ಈ ಕ್ಯಾಪ್ಸೂಲ್ ನೈಸರ್ಗಿಕವಾಗಿ ಟೆಸ್ಟೊಸ್ಟೆರೋನ್ ಹೆಚ್ಚಿಸುತ್ತದೆ.
ಮಹಿಳೆಯರ ಫರ್ಟಿಲಿಟಿ ಟೆಸ್ಟ್ : ಫೀಮೇಲ್ ಫರ್ಟಿಲಿಟಿ ಟೆಸ್ಟ್ ನಿಂದ ಮಹಿಳೆಯರು ಬೆರಳಿನ ರಕ್ತದ ಮೂಲಕ ತಮ್ಮ ಹಾರ್ಮೋನ್ ಎಮ್ಓಟಿ ಮಾಡಬಹುದು. ಹೀಗೆ ತೆಗೆದ ರಕ್ತದ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಿ ಎಸ್ಟ್ರೋಜನ್, ಟೆಸ್ಟೊಸ್ಟೆರೋನ್, ಫೋಲಿಕ್ ಹಾರ್ಮೋನ್ ಮತ್ತು ಥೈರಾಯ್ಡ್ ಮುಂತಾದವುಗಳ ಪರೀಕ್ಷೆ ಮಾಡಿಸಬಹುದು.
ಸೆಕ್ಸ್ ಡ್ರೈವ್ ಸಪ್ಲಿಮೆಂಟ್ : ಮಾರುಕಟ್ಟೆಯಲ್ಲಿ ಸಿಗುವ ಕ್ಯಾಪ್ಸೂಲ್ ಉತ್ಪನ್ನಗಳು ಡೈಮಿಯಾನಾ, ಮೈಕಾ, ಜಿನಸೆಂಗ್, ಶುಂಠಿ ರೋಡಿಯಾಲಾದಿಂದ ಕೂಡಿದೆ. ಇದರಲ್ಲಿ ವಿಟಮಿನ್ ಬಿ3 ಮತ್ತು ಅಮೀನೋ ಎಸಿಡ್ ಗಳು ಕೂಡ ಇದೆ. ಇದರಿಂದ ಮಹಿಳೆಯರ ಲೈಂಗಿಕಾಸಕ್ತಿ ಹೆಚ್ಚುತ್ತದೆ. ತಜ್ಞರು ಕೂಡ ಇದನ್ನು ಸೇವಿಸುವುದು ಸುರಕ್ಷಿತ ಎನ್ನುತ್ತಾರೆ.
ಲೈಂಗಿಕಾಸಕ್ತಿ ಹೆಚ್ಚಿಸುವಂತ ಕ್ಯಾಪ್ಸೂಲ್ ಗಳ ಹೊರತಾಗಿ ಬೆಡ್ ರೂಮಿನಲ್ಲಿ ಪ್ರಿಮೆಚ್ಯೂರ್ ಇಜೆಕುಲೇಶನ್ ಸ್ಪ್ರೇ, ಪೆಲ್ವಿಕ್ ಫ್ಲೋರ್ ಎಕ್ಸಸೈಜರ್, ಫರ್ಟಿಲಿಟಿ ಟ್ರ್ಯಾಕರ್ ಅಪ್ಲಿಕೇಷನ್, ಗರ್ಭನಿರೋಧಕ ಮಾತ್ರೆ, ಕಾಂಡೋಮ್ ಮತ್ತು ಲುಬ್ರಿಕೆಂಟ್ ಗಳನ್ನು ಬಳಸಬಹುದು. ಇವು ಕೂಡ ನಿಮ್ಮ ಲೈಂಗಿಕ ಜೀವನವನ್ನು ಸುಂದರಗೊಳಿಸುತ್ತವೆ.