ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಮಕ್ಕಳಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಶುರುವಾಗುತ್ತವೆ. ಮಕ್ಕಳು ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ಸೋಂಕಿಗೆ ಒಳಗಾಗುತ್ತಾರೆ. ಇದರಿಂದಾಗಿ ಅವರ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗುತ್ತದೆ. ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಲವು ಆಹಾರಗಳನ್ನು ಕೊಡಬೇಕು.
ಕಿತ್ತಳೆ – ಚಳಿಗಾಲದಲ್ಲಿ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಿತ್ತಳೆ ಹಣ್ಣುಗಳನ್ನು ಕೊಡಬಹುದು. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.
ಮೊಟ್ಟೆ – ಮಕ್ಕಳ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಬೇಕು. ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಮಗುವಿನ ದೇಹವು ಸಂಪೂರ್ಣವಾಗಿ ಸದೃಢವಾಗಿರುತ್ತದೆ.
ಸೂಪ್ – ಸೊಪ್ಪು ಮತ್ತು ತರಕಾರಿಗಳಿಂದ ಮಾಡಿದ ತಾಜಾ ಸೂಪ್ ಕೂಡ ಮಕ್ಕಳ ಆರೋಗ್ಯಕ್ಕೆ ಹೇಳಿಮಾಡಿಸಿದಂತಿರುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಸೂಪ್ ನೀಡಬೇಕು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಾಲೋಚಿತ ವೈರಸ್‌ಗಳಿಂದ ರಕ್ಷಿಸುತ್ತದೆ.
ಬೆಲ್ಲ – ನೆಗಡಿ, ಕೆಮ್ಮು ಮತ್ತು ಶ್ವಾಸಕೋಶ ಸಂಬಂಧಿ ಸೋಂಕುಗಳನ್ನು ಹೋಗಲಾಡಿಸಲು ಬೆಲ್ಲವು ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳು ನಿಯಮಿತವಾಗಿ ಬೆಲ್ಲ ಸೇವಿಸಬೇಕು.
ಹಾಲು – ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಹಾಲು ಕುಡಿಸಬೇಕು. ಹಾಲಿನಲ್ಲಿ ಫಾಸ್ಫರಸ್ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇವು ದೇಹವನ್ನು ಬಲಪಡಿಸುತ್ತವೆ. ಸೋಂಕಿನಿಂದ ಮಕ್ಕಳನ್ನು ರಕ್ಷಿಸುತ್ತವೆ.