ಚರ್ಮದಲ್ಲಿ ತುರಿಕೆ ಸಾಮಾನ್ಯ ಸಮಸ್ಯೆ. ಶುಷ್ಕತೆ, ಕೀಟಗಳ ಕಡಿತ, ದದ್ದುಗಳು, ಅಲರ್ಜಿಗಳಿಂದ ಅಥವಾ ಕೊಳಕು ಶೇಖರಣೆಯಂತಹ ಹಲವು ಕಾರಣಗಳಿಂದ ತುರಿಕೆ ಉಂಟಾಗುತ್ತದೆ. ಅನೇಕ ಬಾರಿ ತಡೆಯಲಸಾಧ್ಯವಾದ ತುರಿಕೆಯಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದರಿಂದ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಸಹ ಕಷ್ಟವಾಗುತ್ತದೆ. ಕೆಲವು ನಿರ್ದಿಷ್ಟ ಸಾರಭೂತ ತೈಲಗಳ ಬಳಕೆಯಿಂದ ತುರಿಕೆಯನ್ನು ನಿವಾರಿಸಬಹುದು.
ಕ್ಯಾಮೊಮೈಲ್ ಆಯಿಲ್ : ಕ್ಯಾಮೊಮೈಲ್ ಎಣ್ಣೆಯು ಪರಿಮಳಯುಕ್ತವಾಗಿರುತ್ತದೆ. ಇದನ್ನು ಬಳಸುವುದರಿಂದ ಎಸ್ಜಿಮಾ, ಪೈಲ್ಸ್ ಮತ್ತು ಡಯಾಪರ್ ದದ್ದುಗಳಿಂದ ಉಂಟಾಗುವ ತುರಿಕೆಗೆ ಪರಿಹಾರ ಸಿಗುತ್ತದೆ. ತಲೆಯಲ್ಲಿ ತುರಿಕೆಯಾದರೂ ಈ ಎಣ್ಣೆಯನ್ನು ಬಳಸಬಹುದು.
ಲ್ಯಾವೆಂಡರ್ ಎಣ್ಣೆ : ಲ್ಯಾವೆಂಡರ್ ಎಣ್ಣೆಯ ಸುಗಂಧವು ನಮ್ಮನ್ನು ಬಹಳ ದೂರದಿಂದಲೇ ಆಕರ್ಷಿಸುತ್ತದೆ. ಲ್ಯಾವೆಂಡರ್ ಎಣ್ಣೆಯಲ್ಲಿ ಶಿಲೀಂಧ್ರ ವಿರೋಧಿ ಗುಣಗಳಿವೆ. ಕಲೆ, ತುರಿಕೆ ಮತ್ತು ದದ್ದುಗಳಿಂದ ಪರಿಹಾರ ಬಡೆಯಲು ಇದನ್ನು ಬಳಸಬಹುದು.
ಪುದೀನಾ ಎಣ್ಣೆ : ಪುದೀನಾ ಎಣ್ಣೆಯು ತಂಪಾಗಿಸುವ ಗುಣಗಳನ್ನು ಹೊಂದಿದೆ. ಇದು ತುರಿಕೆಗೆ ಪರಿಹಾರ ನೀಡಬಲ್ಲದು. ಕೀಟಗಳ ಕಡಿತದಿಂದ ಅಥವಾ ಯಾವುದಾದರೂ ಕಾಯಿಲೆಯಿಂದ ತುರಿಕೆ ಹೆಚ್ಚಾದಾಗ ಈ ಎಣ್ಣೆಯನ್ನು ಬಳಸುವುದು ಸೂಕ್ತ. ಪುದೀನಾ ಎಣ್ಣೆಯನ್ನು ಸಾಮಾನ್ಯವಾಗಿ ಪೆಟ್ರೋಲಿಯಂ ಜೆಲ್ಲಿಯೊಂದಿಗೆ ಬೆರೆಸಬಹುದು.
ರೋಸ್ ಜೆರೇನಿಯಂ ಆಯಿಲ್ : ರೋಸ್ ಜೆರೇನಿಯಂ ಎಣ್ಣೆಯು ಔಷಧಿಗಿಂತ ಕಡಿಮೆಯಿಲ್ಲ. ಇದು ಶಿಲೀಂಧ್ರ ವಿರೋಧಿ ಮತ್ತು ಎಂಟಿಮೈಕ್ರೋಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಎಸ್ಜಿಮಾ ಮತ್ತು ಒಣ ಚರ್ಮದಿಂದ ಉಂಟಾಗುವ ತುರಿಕೆಗೆ ಈ ಎಣ್ಣೆಯಲ್ಲಿ ಪರಿಹಾರವಿದೆ.
ಟೀ ಟ್ರೀ ಆಯಿಲ್ : ಎಂಟಿಮೈಕ್ರೊಬಿಯಲ್, ಎಂಟಿಫಂಗಲ್ ಮತ್ತು ಉರಿಯೂತದ ಗುಣಲಕ್ಷಣಗಳು ಟೀ ಟ್ರೀ ಎಣ್ಣೆಯಲ್ಲಿ ಕಂಡುಬರುತ್ತವೆ. ತುರಿಕೆ ಇರುವ ಜಾಗದಲ್ಲಿ ಈ ಎಣ್ಣೆಯನ್ನು ಅನ್ವಯಿಸರೆ ತುರಿಕೆ ನಿವಾರಣೆಯಾಗುತ್ತದೆ.