alex Certify ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗುತ್ತವೆ ಈ ಸಣ್ಣ ಸಣ್ಣ ವಿಷಯಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗುತ್ತವೆ ಈ ಸಣ್ಣ ಸಣ್ಣ ವಿಷಯಗಳು…!

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಅದೆಷ್ಟೋ ಬಾರಿ ದಂಪತಿಗಳ ನಡುವೆ ಶುರುವಾದ ಸಣ್ಣ ಜಗಳ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. ದಂಪತಿಗಳ ಮಧ್ಯೆ ಜಗಳಕ್ಕೆ ಕಾರಣವಾಗಬಲ್ಲ ಸಣ್ಣ-ಪುಟ್ಟ ಸಂಗತಿಗಳನ್ನು ಅರಿತಾಗ ಮಾತ್ರ ಅದನ್ನು ತಪ್ಪಿಸಬಹುದು.

ಮದುವೆಯಾದ ಹೊಸದರಲ್ಲಿ ಸಂಬಂಧವು ಸಿಹಿಯಾಗಿರುತ್ತದೆ. ಪರಸ್ಪರರ ಬಗ್ಗೆ ಎಲ್ಲಾ ಸಂಗತಿಗಳು ಇಷ್ಟವಾಗುತ್ತವೆ, ಸರಿ ಎನಿಸುತ್ತವೆ. ಆದರೆ ಸ್ವಲ್ಪ ಸಮಯದ ನಂತರ ಪತಿ-ಪತ್ನಿ ಮಧ್ಯೆ ಜಗಳಗಳು ಪ್ರಾರಂಭವಾಗುತ್ತವೆ. ಸಣ್ಣ-ಪುಟ್ಟ ವಿವಾದಗಳು ದೊಡ್ಡ ಜಗಳಗಳ ರೂಪವನ್ನು ಪಡೆಯುತ್ತವೆ. ನಂತರ ಅವರಿಬ್ಬರ ಪ್ರೀತಿ ತುಂಬಿದ ಸಂಬಂಧ ಮುರಿದು ಬೀಳುವ ಹಂತ ತಲುಪುತ್ತದೆ.

ಇಬ್ಬರೂ, ಸಂಗಾತಿ ತಮ್ಮನ್ನು ಗೌರವಿಸಬೇಕೆಂದು ಬಯಸುತ್ತಾರೆ. ಪರಸ್ಪರರನ್ನು ಗೌರವಿಸದಿದ್ದರೆ ಅದೇ ಸಂಗತಿ ಜಗಳಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಸಂಗಾತಿಯನ್ನು ಗೌರವಿಸಿ. ಅವರ ಮಾತುಗಳನ್ನು ಕೇಳಿ, ಅರ್ಥಮಾಡಿಕೊಳ್ಳಿ.

ಮಹಿಳೆಯರು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಇದಕ್ಕೆ ಪತಿ ಒಪ್ಪಿಕೊಳ್ಳದೇ ಇದ್ದಾಗ ದಂಪತಿ ಮಧ್ಯೆ ಕಲಹ ಉಂಟಾಗಬಹುದು. ಬಿಡುವಿಲ್ಲದ ಕೆಲಸದಿಂದ ಸ್ವಲ್ಪ ಸಮಯ ಮಾಡಿಕೊಂಡು ಸಂಗಾತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗಿ.

ಕುಟುಂಬ ಸದಸ್ಯರನ್ನು ಪರಸ್ಪರರು ಗೌರವಿಸುತ್ತಾರೆ ಎಂಬ ನಿರೀಕ್ಷೆ ಇಬ್ಬರಲ್ಲೂ ಇರುತ್ತದೆ. ಇದು ಸಂಭವಿಸದಿದ್ದರೆ ದಂಪತಿಗಳ ನಡುವೆ ವಾದ-ವಿವಾದ ಪ್ರಾರಂಭವಾಗುತ್ತದೆ. ಇದನ್ನು ತಪ್ಪಿಸಲು ದಂಪತಿಗಳು ಪರಸ್ಪರರ ಕುಟುಂಬ ಸದಸ್ಯರನ್ನು ಗೌರವಿಸಬೇಕು.

ಆರಂಭದಲ್ಲಿ ಎಲ್ಲರೂ ತಮ್ಮ ಸಂಗಾತಿಗೆ ಸಮಯವನ್ನು ನೀಡುತ್ತಾರೆ. ಆದರೆ ಕ್ರಮೇಣ ಅದು ಕಡಿಮೆಯಾಗುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಇದೇ ಕಾರಣಕ್ಕೆ ಸಣ್ಣ ವಿಷಯಗಳಿಗೂ ಜಗಳಗಳು ಸಂಭವಿಸಬಹುದು. ಹಾಗಾಗಿ ಸಂಗಾತಿಗೆ ಸಮಯ ನೀಡಿ. ಅವರೊಂದಿಗೆ ಕುಳಿತು ಅವರ ಮಾತುಗಳನ್ನು ಆಲಿಸಿ, ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು. ಇದರಿಂದ ಸಂಬಂಧಗಳು ಸುಧಾರಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...