
ಸುಖ, ಸಮೃದ್ಧಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಮನೆಯಲ್ಲಿ ಸದಾ ಸಂತೋಷ, ಖುಷಿ, ಆರೋಗ್ಯ, ಐಶ್ವರ್ಯ ನೆಲೆಸಿರಲೆಂದು ಹಗಲಿರುಳು ಕಷ್ಟಪಡ್ತಾರೆ. ತನ್ನ ಜೊತೆ ಇಡೀ ಕುಟುಂಬದ ಸಂತೋಷವನ್ನು ಬಯಸ್ತಾನೆ.
ಆದ್ರೆ ಬಯಸಿದ್ದೆಲ್ಲ ಸುಲಭವಾಗಿ ಆಗೋದಿಲ್ಲ. ಮನೆಯಲ್ಲಿರುವ ಕೆಲವೊಂದು ನಕಾರಾತ್ಮಕ ಶಕ್ತಿಗಳು ಪಟ್ಟ ಶ್ರಮವನ್ನು ಹಾಳು ಮಾಡುತ್ತವೆ. ಸಣ್ಣ ಸಣ್ಣ ಬದಲಾವಣೆ ಮನುಷ್ಯನ ಜೀವನವನ್ನು ಬದಲಿಸಬಲ್ಲದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ನಾನ ಮಾಡದೆ ನೀರು, ಟೀಯನ್ನು ಕುಡಿಯಬಾರದು. ಬೆಂಕಿಯನ್ನು ಹಚ್ಚಬಾರದು. ದೇವಸ್ಥಾನಗಳಿಗಂತೂ ಹೋಗಲೇಬಾರದು. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡಿಯೇ ಮುಂದಿನ ಕೆಲಸ ಶುರು ಮಾಡಿದ್ರೆ ಎಲ್ಲವೂ ಶುಭವಾಗಲಿದೆ.
ಸ್ನಾನವಾದ್ಮೇಲೆ ದೇವರಿಗೆ ಪೂಜೆ ಮಾಡಬೇಕು. ಸಿಗುವ ಸ್ವಲ್ಪ ಸಮಯದಲ್ಲಿಯೇ ದೀಪ, ಧೂಪ ಬೆಳಗಬೇಕು. ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ದೇವರ ಪೂಜೆ ಮಾಡಬೇಕು.
ಮನೆಯ ಮುಂದೆ ತುಳಸಿ ಗಿಡ ಸದಾ ಇರಲಿ. ಪ್ರತಿ ದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡಿ. ತುಳಸಿ ಪೂಜೆ ಮಾಡುವುದ್ರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ಪೂಜೆ ಮಾಡುವ ವೇಳೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಗಂಗಾಜಲವನ್ನು ಹಾಕಿ ಪೂಜೆ ಮಾಡಿ. ಸೂರ್ಯ ದೇವನಿಗೆ ಅವಶ್ಯವಾಗಿ ಜಲವನ್ನು ಅರ್ಪಿಸಿ. ಈ ವೇಳೆ ‘ಓಂ ಆದಿತ್ಯಾಯ ನಮಃ’ ಮಂತ್ರವನ್ನು 9 ಬಾರಿ ಜಪಿಸಿ.
ಪ್ರತಿ ದಿನ ಉತ್ತರ ದಿಕ್ಕಿಗೆ ಮುಖ ಮಾಡಿಯೇ ಆಹಾರ ಸೇವನೆ ಮಾಡಬೇಕು. ಅಡುಗೆ ಮನೆ ಅಥವಾ ಡೈನಿಂಗ್ ರೂಮಿನಲ್ಲಿ ಮಾತ್ರ ಆಹಾರ ಸೇವನೆ ಮಾಡಬೇಕು. ಅಡುಗೆ ಮನೆಯಲ್ಲಿ ಆಹಾರ ಸೇವನೆ ಮಾಡಿದ್ರೆ ರಾಹು ಶಾಂತವಾಗಿರುತ್ತಾನೆ. ಹಾಸಿಗೆ ಮೇಲೆ ಎಂದೂ ಆಹಾರ ಸೇವನೆ ಮಾಡಬಾರದು. ಇದ್ರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ.
ಪ್ರತಿ ದಿನ ಸಂಜೆ ತುಪ್ಪದ ದೀಪವನ್ನು ಹಚ್ಚಿ, ಹನುಮಾನ್ ಚಾಲೀಸ್ ಪಠಿಸಿ. ನಂತ್ರ ಆರತಿ ಎತ್ತಿ. ದೇವಾನುದೇವತೆಗಳಿಗೆ ಅರ್ಪಿಸಿದ ಹೂವನ್ನು ಮನೆಯಲ್ಲಿ ದೇವರ ಮುಂದೆ ಇಡಬೇಡಿ. ಪವಿತ್ರ ಸ್ಥಳದಲ್ಲಿ ಅದನ್ನು ಹಾಕಿ.