alex Certify ಈ ಚಿಹ್ನೆಗಳು ನೀವು ಬಲವಾದ ಸಂಬಂಧ ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿಹ್ನೆಗಳು ನೀವು ಬಲವಾದ ಸಂಬಂಧ ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ

ಪ್ರತಿಯೊಂದು ಸಂಬಂಧವು ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತದೆ, ಮತ್ತು ಸಂಬಂಧದಲ್ಲಿ ಆಗಾಗ ಜಗಳಗಳು, ಮನಸ್ಥಾಪಗಳು ನಡೆಯುತ್ತಿರುತ್ತದೆ. ಆದರೆ , ಬಲವಾದ ಸಂಬಂಧ ಹೊಂದಿರುವ ದಂಪತಿಗಳು ಈ ಸಮಸ್ಯೆಗಳನ್ನು ಹೇಗಾದರೂ ಮಾಡಿ ನಿಭಾಯಿಸಿ ಮತ್ತೆ ಪ್ರೀತಿಯಿಂದ ಜೀವನ ಸಾಗಿಸುತ್ತಾರೆ. ಇಂತಹ ಸಂಬಂಧಗಳು ಎಷ್ಟೇ ದೊಡ್ಡ ಜಗಳ ನಡೆದರೂ ಅದು ಮುರಿದು ಬೀಳುವುದಿಲ್ಲ. ಹಾಗಾದ್ರೆ ನಿಮ್ಮ ಸಂಬಂಧ ಬಲವಾಗಿದೆಯೇ? ಎಂಬ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಇದಕ್ಕೆ ಉತ್ತರ ಇಲ್ಲಿದೆ. ನಿಮ್ಮ ಸಂಬಂಧದಲ್ಲಿ ಈ ಚಿಹ್ನೆಗಳು ಕಂಡುಬಂದರೆ ನಿಮ್ಮ ಸಂಬಂಧ ಬಲವಾಗಿದೆ ಎಂಬುದನ್ನು ಸೂಚಿಸುತ್ತದೆಯಂತೆ.

*ಜಗಳದ ನಡುವೆಯೂ ನೀವಿಬ್ಬರೂ ಗಂಭೀರವಾಗಿ ಮತ್ತು ಬಹಿರಂಗವಾಗಿ ಮಾತುಕತೆ ನಡೆಸುತ್ತೀರಿ. ಈ ಮೂಲಕ ನಿಮ್ಮ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುತ್ತೀರಿ.

*ನಿಮ್ಮಬ್ಬರ ನಡುವೆ ವಾದಗಳು ನಡೆಯುತ್ತಿದ್ದಾಗ ನೀವಿಬ್ಬರೂ ವೈಯಕ್ತಿಕ ವಿಚಾರಗಳನ್ನು ಅಲ್ಲಿ ತರದೆ ಬದಲಾಗಿ, ನೀವು ಮುಂದಿರುವ ಸಮಸ್ಯೆಯ ಮೇಲೆ ಗಮನಹರಿಸಿ ಅದನ್ನು ಸರಿಪಡಿಸಲು ಪರಿಹಾರವನ್ನು ಹುಡುಕುತ್ತೀರಿ.

*ಜಗಳದ ನಡುವೆಯೂ ನೀವು ಪರಸ್ಪರರ ಮಾತುಗಳನ್ನು ಸಕ್ರಿಯವಾಗಿ ಆಲಿಸುತ್ತೀರಿ ಮತ್ತು ಪರಸ್ಪರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಎಂದಾದರೆ ಇದು ಅವರ ಬಗ್ಗೆ ಸಹಾನುಭೂತಿ ಮತ್ತು ರಾಜಿ ಮಾಡಿಕೊಳ್ಳುವ ಇಚ್ಛೆಯನ್ನು ತೋರಿಸುತ್ತದೆ.

*ನೀವಿಬ್ಬರೂ ತಪ್ಪು ಮಾಡಿದಾಗ ಕ್ಷಮೆಯಾಚಿಸುತ್ತೀರಿ ಮತ್ತು ಪ್ರಾಮಾಣಿಕವಾಗಿ ಕ್ಷಮಿಸಿ ಎಂದು ಹೇಳುವ ಮೂಲಕ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ.

*ಸಂಘರ್ಷಗಳನ್ನು ಪರಿಹರಿಸಿದ ನಂತರ, ನೀವು ಹಿಂದಿನ ಸಮಸ್ಯೆಗಳ ಬಗ್ಗೆ ಮಾತನಾಡದೇ ಮುಂದಿನ ವಿಚಾರಗಳ ಬಗ್ಗೆ ಗಮನ ಹರಿಸುತ್ತೀರಿ.

*ನೀವು ಪರಸ್ಪರರ ಗುರಿಗಳು, ಕನಸುಗಳು ಮತ್ತು ಆಕಾಂಕ್ಷೆಗಳನ್ನು ಬೆಂಬಲಿಸುತ್ತೀರಿ, ವೈಯಕ್ತಿಕವಾಗಿ ಸಂಗಾತಿಗೆ ಬೆಳೆಯಲು ಪರಸ್ಪರ ಪ್ರೋತ್ಸಾಹಿಸುತ್ತೀರಿ.

* ನೀವು ನಿಮ್ಮ ಸಂಗಾತಿಯ ಜೊತೆ ತಮಾಷೆಯಿಂದ ಇರುತ್ತೀರಿ ಮತ್ತು ಕಷ್ಟದ ಕ್ಷಣಗಳಲ್ಲಿಯೂ ಒಟ್ಟಿಗೆ ಇದ್ದು, ನಗುನಗುತ್ತಾ ಒತ್ತಡವನ್ನು ನಿವಾರಿಸಲು ಪ್ರಯತ್ನಿಸುತ್ತೀರಿ.

*ನೀವು ನಿಮ್ಮ ಸಂಬಂಧಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೀರಿ ಮತ್ತು ಪರಸ್ಪರರಿಗಾಗಿ ಸಮಯವನ್ನು ಮೀಸಲಿಡುತ್ತೀರಿ.

*ನೀವಿಬ್ಬರೂ ಪರಸ್ಪರರು ಮಾಡಿದ ಕೆಲಸಕ್ಕೆ ಮೆಚ್ಚುಗೆ ಮತ್ತು ಸಹಾಯಕ್ಕೆ ಕೃತಜ್ಞತೆಯನ್ನು ತೋರಿಸುತ್ತೀರಿ.

*ನೀವು ಪರಸ್ಪರರ ಆಸೆ, ಆಕಾಂಕ್ಷೆ, ವ್ಯಕ್ತಿತ್ವವನ್ನು ಗೌರವಿಸುತ್ತೀರಿ, ಮತ್ತು ಪರಸ್ಪರರಿಗೆ ಅವರ ಇಚ್ಛೆಯಂತೆ ಇರಲು ಅವಕಾಶ ಮಾಡಿಕೊಡುತ್ತೀರಿ.

*ನೀವು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ನಂಬುತ್ತೀರಿ, ಯಾವುದೇ ವಿಚಾರಕ್ಕೂ ಅನುಮಾನ ಪಡುವುದಿಲ್ಲ.

*ನೀವು ಯಾವುದೇ ಕೆಲಸವನ್ನು ಒಟ್ಟಾಗಿ ಸೇರಿ ಮಾಡುತ್ತೀರಿ, ಅದರಲ್ಲಿ ಬರುವ ಸಮಸ್ಯೆಗಳು ಮತ್ತು ಅಡೆತಡೆಗಳನ್ನು ಜೊತೆಯಾಗಿ ನಿಭಾಯಿಸುತ್ತೀರಿ.

*ಜಗಳದ ನಂತರ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಂತಹ ಸನ್ನೆಗಳನ್ನು ಮಾಡುತ್ತಾ ಸಂಗಾತಿಗೆ ವಾತ್ಸಲ್ಯ ತೋರುತ್ತೀರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...