ಚಳಿಗಾಲದಲ್ಲಿ ಮೂಲಂಗಿಯನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಮೂಲಂಗಿ ಸೊಪ್ಪಿನ ಪಲ್ಯ, ಸೂಪ್, ಮೂಲಂಗಿ ಪರೋಟ ಹೀಗೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಈ ಋತುವಿನಲ್ಲಿ ಮೂಲಂಗಿ ಹೇರಳವಾಗಿ ದೊರೆಯುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೂಲಂಗಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಮೂಲಂಗಿಯಲ್ಲಿ ಫಂಗಲ್ ಸೋಂಕು ಮತ್ತು ಮಧುಮೇಹವನ್ನು ತಡೆಯುವ ಪೋಷಕಾಂಶಗಳಿವೆ. ಅಧಿಕ ಬಿಪಿ, ಹೃದ್ರೋಗ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹ ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಮೂಲಂಗಿಯಲ್ಲಿ ಹೇರಳವಾದ ನಾರಿನಂಶವಿರುವುದರಿಂದ ಇದು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಆದರೆ ಮೂಲಂಗಿಯನ್ನು ಯಾವ ರೀತಿಯಲ್ಲಿ ಮತ್ತು ಯಾವಾಗ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಮೂಲಂಗಿ ತಿನ್ನಲು ಸರಿಯಾದ ಸಮಯ ಯಾವುದು ?
ಮೂಲಂಗಿಯನ್ನು ಹಗಲಿನಲ್ಲಿಯೇ ತಿನ್ನಬೇಕು. ಮೂಲಂಗಿ ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಲ್ಲಿ ಕಂಡುಬರುವ ಫೈಬರ್‌ಗಳು ಸಹ ಜೀರ್ಣವಾಗುವುದರಿಂದ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಅಸಿಡಿಟಿ ಮತ್ತು ಹೊಟ್ಟೆ ಉಬ್ಬರಿಸುವಿಕೆಯ ಸಮಸ್ಯೆ ಇದ್ದರೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿಯನ್ನು ತಿನ್ನಬೇಕು.
ಮೂಲಂಗಿ ತಿಂದ ನಂತರ ಈ ತಪ್ಪು ಮಾಡಬೇಡಿ
ಮೂಲಂಗಿ ತಿಂದ ನಂತರ ಹಾಲು ಕುಡಿಯಬಾರದು. ಏಕೆಂದರೆ ಇವೆರಡೂ ವಿಭಿನ್ನ ಸ್ವಭಾವದವು. ಇದು ಆಸಿಡ್ ರಿಫ್ಲಕ್ಸ್‌ನಿಂದ ಹೊಟ್ಟೆಯಲ್ಲಿ ಅತಿಯಾದ ಆಮ್ಲೀಯತೆಯನ್ನು ಉಂಟುಮಾಡಬಹುದು.
ಮೂಲಂಗಿಯನ್ನು ತಿಂದ ನಂತರ ಕಿತ್ತಳೆ ತಿನ್ನಬಾರದು. ಇವೆರಡನ್ನೂ ಒಟ್ಟಿಗೆ ತಿನ್ನುವುದು ದೇಹಕ್ಕೆ ಹಾನಿಕಾರಕವಾಗಿದೆ. ಇದು ಹೊಟ್ಟೆಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ.
ಮೂಲಂಗಿ ತಿಂದ ನಂತರ ಚಹಾ ಕುಡಿಯಬೇಡಿ. ಟೀ ಕುಡಿದರೆ ಜೀರ್ಣಾಂಗ ವ್ಯವಸ್ಥೆಗೆ ಸಮಸ್ಯೆಯಾಗುತ್ತದೆ. ಮೂಲಂಗಿ ತಿಂದ ನಂತರ ಮೊಸರು ಸಹ ತಿನ್ನಬಾರದು. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಮೂಲಂಗಿಯನ್ನು ಈ ರೀತಿ ತಿನ್ನಿ
ಮೂಲಂಗಿಯನ್ನು ತಿನ್ನುವಾಗ ಅದಕ್ಕೆ ಬ್ಲಾಕ್ ಸಾಲ್ಟ್ ಮತ್ತು ನಿಂಬೆ ರಸವನ್ನು ಬೆರೆಸಿಕೊಳ್ಳಿ. ಮೂಲಂಗಿಗೇ ಬ್ಲಾಕ್ ಸಾಲ್ಟ್ ಹಾಕಬೇಡಿ. ಬದಲಿಗೆ ನಿಂಬೆರಸಕ್ಕೆ ಉಪ್ಪನ್ನು ಬೆರೆಸಿಕೊಂಡು ಅದರಲ್ಲಿ ಮೂಲಂಗಿಯನ್ನು ಅದ್ದಿರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.