ಕೆಲವರು ಕೂದಲಿನ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ದುಬಾರಿ ಚಿಕಿತ್ಸೆಗಳ ಮೊರೆಹೋಗುತ್ತಿದ್ದಾರೆ. ಹಾಗೇ ಕೆಲವರು ಕೂದಲಿನ ಆರೈಕೆಗಾಗಿ ನೈಸರ್ಗಿಕ ಮನೆಮದ್ದುಗಳನ್ನುಅನುಸರಿಸುತ್ತಾರೆ. ಅಂತವರು ಒಮ್ಮೆ ಕಾಫಿಯನ್ನು ಬಳಸಿ. ಇದರಲ್ಲಿ ಕೆಫೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿದ್ದು, ಇದು ಕೂದಲಿನ ಬೇರುಗಳನ್ನು ಆರೋಗ್ಯವಾಗಿರಿಸುತ್ತದೆಯಂತೆ. ಹಾಗಾಗಿ ಇದು ನಿಮ್ಮ ಕೂದಲಿನ 7 ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆಯಂತೆ.
ಕೂದಲು ಉದ್ದವಾಗಿ ಬೆಳೆಯಲು 1 ಚಮಚ ಕಾಫಿ ಪುಡಿಗೆ 1 ಚಮಚ ನಿಂಬೆ ರಸ ಅಥವಾ ತೆಂಗಿನೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿ.
ಕೂದಲಿನ ಹೊಳಪು ಹೆಚ್ಚಿಸಲು 1 ಚಮಚ ಕಾಫಿ ಪುಡಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಮಾಡಿ.
ಗುಂಗುರು ಕೂದಲನ್ನು ಆರೋಗ್ಯವಾಗಿರಿಸಲು 1 ಚಮಚ ಕಾಫಿ ಪುಡಿಗೆ 2 ಚಮಚ ಮೊಸರು ಮಿಕ್ಸ್ ಮಾಡಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.
ಕೂದಲಿನ ತುದಿಯಲ್ಲಿ ಕವಲೊಡೆಯುವುದನ್ನು ತಡೆಯಲು 1 ಚಮಚ ಕಾಫಿ ಪುಡಿಗೆ 1 ಚಮಚ ಮೇಯನೇಸ್ ಅನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.
ಕೂದಲು ತೆಳ್ಳಗಾಗಿದ್ದರೆ ಅದನ್ನು ದಪ್ಪವಾಗಿಸಲು 1 ಚಮಚ ಕಾಫಿ ಪುಡಿಗೆ 1 ಮೊಟ್ಟೆಯ ಬಿಳಿ ಲೋಳೆಯನ್ನು ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ತೊಳೆಯಿರಿ. ಇದನ್ನು ವಾರದಲ್ಲಿ ಒಮ್ಮೆ ಬಳಸಿ.
ಒಣಕೂದಲಿನ ಸಮಸ್ಯೆಯನ್ನು ನಿವಾರಿಸಲು 1 ಚಮಚ ಕಾಫಿ ಪುಡಿಗೆ ½ ಆವಕಾಡೊ ತಿರುಳನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಿರಿ.
ತಲೆಹೊಟ್ಟನ್ನು ನಿವಾರಿಸಲು 1 ಚಮಚ ಕಾಫಿ ಪುಡಿಗೆ ಕೆಲವು ಹನಿ ಟೀ ಟ್ರೀ ಆಯಿಲ್ ಅನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ 20-30 ನಿಮಿಷ ಬಿಟ್ಟು ಕೂದಲನ್ನು ತಣ್ಣೀರಿನಿಂದ ತೊಳೆಯಿರಿ.