ಶಾಲಾ ಮಕ್ಕಳ ಮುದ್ದಾದ ಸ್ಕಿಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯುವ ಪೀಳೀಗೆಗೆ ಜೀವನ ಪಾಠ ಹೇಳುವಂತಿದೆ.
ಆ ವಿಡಿಯೋವನ್ನು ಫಿಗೆನ್ ಎಂಬ ಮಹಿಳೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. 27 ಸೆಕೆಂಡುಗಳ ಕ್ಲಿಪ್ನಲ್ಲಿ, ಚಿಕ್ಕ ವಿದ್ಯಾರ್ಥಿಗಳ ಗುಂಪು ತಮ್ಮ ಶಾಲಾ ತರಗತಿಯಲ್ಲಿ ಬಸ್ ಸನ್ನಿವೇಶವನ್ನು ಮರುಸೃಷ್ಟಿಸಿದ್ದಾರೆ.
ಚಿಕ್ಕ ಹುಡುಗ ಚಾಲಕನ ಸ್ಥಾನದಲ್ಲಿ ಕುಳಿತು ಸ್ಟೇರಿಂಗ್ ತಿರುಗಿಸುವುದು ಕಾಣಿಸುತ್ತದೆ, ಇತರ ಮಕ್ಕಳು ಬಸ್ನಲ್ಲಿ ಪ್ರಯಾಣಿಕರಂತೆ ಕುಳಿತಿದ್ದಾರೆ. ಈ ವೇಳೆ ವೃದ್ಧರು, ಸಣ್ಣ ಮಗುವಿನೊಂದಿಗೆ ಬಸ್ ಏರಿದ ಮಹಿಳೆ, ಗರ್ಭಿಣಿಯ ರೂಪದಲ್ಲಿ ಇನ್ನೊಂದಿಷ್ಟು ಮಕ್ಕಳು ಕಾಲ್ಪನಿಕ ಬಸ್ ಏರಿದಾಗ ಆಸನದಲ್ಲಿ ಕುಳಿತಿದ್ದ ಮಕ್ಕಳು ಒಬ್ಬೊಬ್ಬರಾಗಿ ಆಸನ ಬಿಟ್ಟುಕೊಡುವ ಸನ್ನಿವೇಶವಿದೆ.
ಮೊದಲು ಒಬ್ಬ ವಿದ್ಯಾರ್ಥಿ ವೃದ್ಧ ವ್ಯಕ್ತಿಗಾಗಿ ತನ್ನ ಸ್ಥಾನವನ್ನು ಖಾಲಿ ಮಾಡಿದ್ದು, ನಂತರ ಗರ್ಭಿಣಿ ಮಹಿಳೆಗಾಗಿ ತನ್ನ ಸ್ಥಾನ ಬಿಟ್ಟುಕೊಡುವ ಸನ್ನಿವೇಶ ಕಾಣಿಸುತ್ತದೆ. ಇದೊಂದು ರೀತಿ ಮನಮುಟ್ಟುವಂತಿದೆ.
ನೆಟ್ಟಿಗರಿಗೂ ಇದು ಬಹಳ ಇಷ್ಟವಾಗಿದ್ದು, ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
https://twitter.com/TheFigen/status/1550230229762953217?ref_src=twsrc%5Etfw%7Ctwcamp%5Etweetembed%7Ctwterm%5E1550230229762953217%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthese-school-kids-cute-skit-has-a-million-dollar-life-lesson-watch-viral-video-1978858-2022-07-22